ಕಾಂಗ್ರೆಸ್ ಸಮಿತಿಯ ವಿವಿಧ ಹುದ್ದೆಗಳಿಗೆ ನೇಮಕ

0
25

ಶಹಾಬಾದ: ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರ ಅನುಮೋದನೆ ಮೇರೆಗೆ ಕಾಂಗ್ರೆಸ್ ಸೇವಾದಳದ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಡಾ. ಅಹಮದ್ ಪಟೇಲ್ ಅವರನ್ನು ಹಾಗೂ ಶಹಾಬಾದ ಬ್ಲಾಕ್ ಅಧ್ಯಕ್ಷರನ್ನಾಗಿ ನಿಂಗಣ್ಣ ಸಂಗಾವಿಕರ್ ಅವರನ್ನು ನೇಮಕ ಮಾಡಲಾಗಿದೆ.

ಅಲ್ಲದೇ ಕರ್ನಾಟಕ ಪ್ರದೇಶ ಇಂಡಿಯನ್ ನ್ಯಾಷನಲ್ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಮಿತಿಯ (ಇಂಟೆಕ್) ಅಧ್ಯಕ್ಷ ಲಕ್ಷ್ಮಿವೆಂಕಟೇಶ ,ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೆದಾರ ಹಾಗೂ ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ ಘೂಳಿ ಅವರ ಆದೇಶ ಮೇರೆಗೆ ಕರ್ನಾಟಕ ಪ್ರದೇಶ ಇಂಡಿಯನ್ ನ್ಯಾಷನಲ್ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗದ ತಾಲೂಕಾಧ್ಯಕ್ಷರನ್ನಾಗಿ ಸುನೀಲ ಚವ್ಹಾಣ ಅವರನ್ನು ನೇಮಕ ಮಾಡಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here