ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಭಾವಚಿತ್ರ ವಿರೂಪ ಗೊಳಿಸಿ ಅವಮಾನ ಮಾಡಿ ಅನೇಕ ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದೆ ರಾಜಕೀಯ ಹೇಳಿಕೆಗಳ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ ಇದನ್ನು ಬಿಟ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಟಕಲನ ಶ್ರೀ ಸಿದ್ದರಾಮ ಮಹಾಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವೀರಶೈವ ಲಿಂಗಾಯತ್ ಮಹಾ ವೇದಿಕೆ ಕಾಳಗಿ ತಾಲೂಕು ವತಿಯಿಂದ ಹಲ್ಕಟ್ಟಿ ಗ್ರಾಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಚಿಂಚೋಳಿ ಕಲಬುರ್ಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಶ್ವಗುರು ಬಸವೇಶ್ವರರು ಒಂದೇ ಸಮಾಜಕ್ಕೆ ಸೀಮಿತವಲ್ಲ ಅವರು ಇಡೀ ವಿಶ್ವಕ್ಕೆ ಸೇರಿದವರು ಇಂಥವರನ್ನು ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆವಿಧಿಸಬೇಕೆಂದು ಎಂದು ಒತ್ತಾಯಿಸಿದರು.
ಭರತನೂರ ಪೂಜ್ಯರಾದ ಚಿಕ್ಕಗುರು ನಂಜೇಶ್ವರ ಮಹಾಸ್ವಾಮಿಜಿ ಮಾತನಾಡಿ ಇಡೀ ಜಗತ್ತಿಗೆ ತತ್ವಗಳನ್ನು ಸಾರಿದ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಖಂಡನೀಯವಾಗಿದೆ ಪೆÇಲೀಸರು ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೂಗುರು (ಕೆ) ಪೂಜ್ಯರು ಡಾಕ್ಟರ್ ಚನ್ನರುದ್ರಮನಿ ಶಿವಾಚಾರ್ಯರು ಮಾತನಾಡಿ ವಿಶ್ವಗುರು ಬಸವೇಶ್ವರರಿಗೆ ಅವಮಾನ ಮಾಡಿದ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಸರ್ಕಾರ ಮಹಾನ್ ನಾಯಕರ ಭಾವಚಿತ್ರದ ಬಳಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ನಂತರ ತಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಮುಖ್ಯ ಬಜಾರ್ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕಲ್ಬುರ್ಗಿ ಚಿಂಚೋಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ್ ಮಹಾವೇದಿಕ್ಕೆ ಅಧ್ಯಕ್ಷರಾದ ಅನಂದ ಕೇಶ್ವರ್, ಜಗದೀಶ್ ಪಾಟೀಲ್,ಶಂಕರ್ ಚೌಕ, ರಾಜಕುಮಾರ್ ಸಿಲ್ಲಿನ, ರಾಜಶೇಖರ್ ಗುಡ್ಡದ, ವಿಜಯ್ ಕುಮಾರ್ ಪಾಟೀಲ್ ಗೋಣಗಿ, ಮಂಜುನಾಥ್ ಬೆರನ್, ರಾಜಕುಮಾರ್ ಕೊರವರ ಮಂಗಲಗಿ, ವಿಶ್ವನಾಥ್ ಅಂಕಲಗಿ, ಇಶು ಗೌಡ ಮಳಗಿ, ಶಿವಕುಮಾರ್ ಕೊಡಸಾಲಿ, ರೇವಣಸಿದ್ದಪ್ಪ ತೇಗಲ್ತಿಪ್ಪಿ, ವಿಜಯ್ ಕುಮಾರ್ ಚೆಂಗಟಿ, ಶರಣ್ ಗೌಡ ಪಾಟೀಲ್ ಕಂದ್ಗುಳ್, ಸಂಗಮೇಶ್ ಪಾಟೀಲ್ ಕಂದಗುಳ, ಶರಣು ಸೀಗಿ ರಟಗಲ, ಶರಣು ಬೈರಪ್ ದರಿ, ಶಿವರಾಜ್ ಪಾಟೀಲ್ ಅರಣಕಲ, ಮಹೇಶ್ ಪಾಟೀಲ್ ಅಲ್ಲಾಪುರ್, ಶರಣು ಕೇಶ್ವರ ,ಸೋಮಶೇಖರ್ ಮಾಕಾ, ಸಂಗಣ್ಣ ದೊಡ್ಡಮನಿ, ಮಲ್ಲಿನಾಥ್ ಪಾಟೀಲ್, ರವೀಂದ್ರ ದಂಡಗಿ, ರಮೇಶ್ ಸಿದ್ದ ನಾಯಕ್, ಸಾಗರ್ ಪಾಟೀಲ್ ಸುಗೂರ್, ಇನ್ನೂ ಸಮಾಜದ ಅನೇಕ ಮುಖಂಡರು ಬಸವಾಭಿಮಾನಿಗಳು ಉಪಸ್ಥಿತರಿದ್ದರು.