ಗರಗದ ಶ್ರೀ ಮಡಿವಾಳೇಶ್ವರ ಅವರ ಕುರಿತು ಪ್ರವಚನ ಕಾರ್ಯಕ್ರಮ

0
77

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ವಿದ್ಯಾನಗರ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದಂಗವಾಗಿ ಕಳೆದೊಂದು ತಿಂಗಳಿಂದ  ನಡೆಯುತ್ತಿರುವ ಧಾರವಾಡ ಜಿಲ್ಲೆಯ ಗರಗದ ಶ್ರೀ ಮಡಿವಾಳೇಶ್ವರ ಅವರ ಕುರಿತು ಪ್ರವಚನ ಕಾರ್ಯಕ್ರಮವನ್ನು ನರೋಣಾ ಹಾಗೂ ಗೋಳಾ(ಬಿ) ಹೊಸಮಠದ ಪೂಜ್ಯ ಶ್ರೀ ಚನ್ನಮಲ್ಲ ಸ್ಚಾಮಿಗಳು ಸೋಮವಾರದಂದೂ ನಡೆದ ಪ್ರವಚನ ನೀಡಿದ ಶ್ರೀಗಳು, ಕಣ್ಣಿಲ್ಲದ್ದವರಿಗೆ ಕಣ್ಣಾದವರು ಶರಣರು. ಶಕ್ತಿಯಿಲ್ಲದ್ದವರಿಗೆ ಶಕ್ತಿಯಾದರು. ಜಗತ್ತನ್ನೇ ಗೆಲ್ಲುವ ಶಕ್ತಿಯನ್ನು ಶರಣರು ತಮ್ಮ ನಡೆ-ನುಡಿಗಳ ಮೂಲಕ ನಮಗೆ ನೀಡಿದ್ದಾರೆ.

ಇಂದಿನ ಸಮಾಜ ಸ್ವಚ್ಚ ಇರಬೇಕಾದರೆ ಗುರುಗಳೆಂಬ ಮೀನು ಬೇಕು.. ಒಂದಕ್ಕೊಂದು ಸಂಬಂಧವಿವೆ ಎಂದು ಮಾರ್ಮಿಕವಾಗಿ ನುಡಿದರು. ಸತ್ತವರನ್ನು ಬದುಕಿಸುವುದಲ್ಲ, ಬದಲಾಗಿ ಸಾಯುವವರನ್ನು ಬದುಕಿಸುವವನು ನಿಜವಾದ ಶರಣನಾಗುತ್ತಾನೆ. ಆ ಕಾರ್ಯ ಶ್ರೀ ಮಡಿವಾಳೇಶ್ವರ ಎಂಬ ಗುರು ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. ಸತ್ತ ಮೇಲೂ ಸಮಾಜಸೇವೆ ಮಾಡಬೇಕಾದರೆ ಪ್ರತಿಯೊಬ್ಬರೂ ದೇಹದಾನ ಮಾಡುವ ಮೂಲಕ ಸಮಾಜದ ಋಣ ತೀರಿಸಿಕೊಳ್ಳಬೇಕೆಂದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಇದೇ ಸಂಸರ್ಭದಲ್ಲಿ ವಿಶೇಷವಾಗಿ ಸತ್ಕರಿಸಿದರು.

Contact Your\'s Advertisement; 9902492681

ಶಿವಾನಂದ ಮಠಪತಿ, ವಿದ್ಯಾನಗರ ವೆಲಫೇರ್ ಸೊಸೈಟಿಯ ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ ಸೇರಿ ಬಡಾವಣೆಯ ಪ್ರಮುಖರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here