ಚಿತ್ತಾಪುರ: ತಾಲ್ಲೂಕಿನ ಮತ ಕ್ಷೇತ್ರಕ್ಕೆ ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ವಿವಿಧ ತಾಂಡಾಗಳಿಗೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಗೊಂಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್.ಬಿ.ನಗರ ತಾಂಡಾ, ಹಲಕಟ್ಟಾ. ರೂ 30 ಲಕ್ಷ, ವಾಡಿ ತಾಂಡಾ, ವಾಡಿ ರೂ 10 ಲಕ್ಷ, ಗಾಂಧಿನಗರ ತಾಂಡಾ, ರಾವೂರು ರೂ 30 ಲಕ್ಷ, ಯರಗಲ ತಾಂಡಾ, ರೂ 10. ಲಕ್ಷ ಹೀಗೆ ಒಟ್ಟು 80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮೊದನೆ ದೊರಕಿದೆ ಎಂದು ಅವರು ತಿಳಿಸಿದರು.