ಕಲಬುರಗಿ: ಹರಿಯಾಣದಿಂದ ಒಂಟೆಗಳನ್ನು ತಂದು ನಗರದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯಲ್ಲಿ ಒಂಟೆಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ ಇಬ್ಬರು ಆರೋಪಿಗಳನ್ನು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಕಾರ್ಯಾಚರಣೆ ನಡೆಸಿ 16 ಒಂಟೆ ಮತ್ತು ಒಂಟೆ ಮಾಂಸ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಯುಸೂಫುದ್ದೀನ್ ಮಹ್ಮದ್ ನಿಜಾಮೋದ್ದಿನ್ ಬಿಜಾಪುರಿ (44) ಹಾಗೂ ಹರಿಯಾಣದ ನೂಹು ಹಿಸ್ಸಾರನ ಇಕ್ಲಾಸ್ ಅಕ್ತರಖಾನ್ (19) ಬಂಧಿತ ಆರೋಪಿಗಳು. ಯುಸೂಫುದ್ದೀನ್ ನಗರದ ಸೋನಿಯಾ ಗಾಂಧಿಯ ಅಮನ್ ನಗರ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದ್ದು, ಹರಿಯಾಣದ ನೂಹು ಮತ್ತು ಇಬ್ಬರು ಸೇರಿ ಒಂಟೆ ಮಾಂಸ ಮಾರಟ ವ್ಯಪಾರ ನಡೆಸುತ್ತಿದ ಖಚಿತ ಮಾಹಿತಿ ಮೆರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಪ್ರಾಣಿ ಹತ್ಯೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣದಾಖಲಿಸಿ ವಿವಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.