ಕಲಬುರಗಿ: ಬಿಜೆಪಿ ಸರಕಾರದಲ್ಲಿ ದಲಿತ ನಾಯಕರಾದ ಗೋವಿಂದ ಕಾರಜೋಳ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ಮತ್ತು ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಖಾತೆಯನ್ನು ನೀಡಿದ್ದಕ್ಕೆ ಮಾದಿಗ ಸಮಾಜದ ಯುವ ಮುಖಂಡ ಬಸವರಾಜ ಹೊಸ್ಮನಿ ಹಂಗರಗಿ ಅಭಿನಂದಿಸಿದ್ದಾರೆ.
ಮುಖ್ಶಮಂತ್ರಿ ಬಿ.ಎಸ್.ಯಡಿಯೂರಪ್ಪˌ ಹೈಕಮಾಂಡ್ ದಲಿತ ನಾಯಕರನ್ನು ಗುರುತಿಸಿದ್ದು ಸ್ವಾಗತಾರ್ಹ ಕ್ರಮವಾಗಿದೆ. ಬಿಜೆಪಿ ಸರಕಾರದಲ್ಲಿ ಸಮಾಜದವರಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ರಾಜ್ಶದ ಮಾದಿಗ ಸಮುದಾಯಕ್ಕೆ ನೀಡಿದ ಗೌರವವಾಗಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಿಜೆಪಿ ನೇತ್ರತ್ವದ ಸರಕಾರ ಈಡೇರಿಸಿದೆ. ಚುನಾವಣೆಯಲ್ಲಿ ಸಮಾಜದ ಬಂಧುಗಳು ಬಹುತೇಕ ಬಿಜೆಪಿಗೆ ಬೆಂಬಲಿಸಿದ್ದಕ್ಕೆ ಮನ್ನಣೆ ಸಿಕ್ಕಂತಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ಪಕ್ಷವನ್ನು ಅಭಿನಂದಿಸಲಾಗುವುದು ಎಂದು ಬಸವರಾಜ ಹೊಸ್ಮನಿ ತಿಳಿಸಿದ್ದಾರೆ.