ಕನ್ನಡದ ಕಂಪು ಬೀಸಿದ ಭಾಲ್ಕಿ ಹಿರೇಮಠ

0
21

ಭಾಲ್ಕಿ; ಹಿರೇಮಠ ಸಂಸ್ಥಾನ ವಿದ್ಯಾಪೀಠ ಅಡಿಯಲ್ಲಿ ನಡೆಯುವ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ಗಡಿಭಾಗದಲ್ಲಿ ಕನ್ನಡದ ಕಂಪು ಬೀಸಿದ ಭಾಲ್ಕಿಯ ಹಿರೇಮಠದ ಪರಂಪರೆ ಶ್ರೇಷ್ಠ ಪರಂಪರೆಯಾಗಿದೆ. ಲಿಂಗೈಕ್ಯ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಗಡಿಭಾಗದಲ್ಲಿ ಕನ್ನಡ ಕಟ್ಟುವ ಮೂಲಕ ನಾಡು, ನುಡಿ ರಕ್ಷಣೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದರು.

Contact Your\'s Advertisement; 9902492681

ಕರ್ನಾಟಕದ ಏಕೀಕರಣಕ್ಕಾಗಿ ಟೊಂಕಕಟ್ಟಿ ನಿಂತರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಕನ್ನಡ ಭಾಷೆಗೆ ಮನ್ನಣೆ ತಂದುಕೊಟ್ಟರು. ಮರಾಠಿ ಮತ್ತು ಉರ್ದು ಭಾಷೆಯ ಪ್ರಾಬಲ್ಯವಿರುವ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಹೊರಗಡೆ ಉರ್ದುಬೋರ್ಡ ಹಾಕಿ ಒಳಗಡೆ ಕನ್ನಡ ಕಲಿಸಿದ ಕನ್ನಡದ ಪಟ್ಟದ್ದೇವರು ಎಂದರೆ ಪೂಜ್ಯರು ಆಗಿದ್ದರು. ಕನ್ನಡ ಮತ್ತು ಬಸವ ಅವರಿಗೆ ಷಡಕ್ಷರಿ ಮಂತ್ರವೇ ಆಗಿತ್ತು. ಇಂತಹ ಮಹನೀಯರ ಹೋರಾಟದಿಂದ ನಮ್ಮ ನಾಡು ಬೆಳಗುತ್ತಿದೆ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣ ಸಾಗರ ಈಶ್ವರ ಖಂಡ್ರೆ ಅವರು ವಹಿಸಿದರು. ರಾಷ್ಟ್ರಧ್ವಜಾರೋಹಣ ಮಾನ್ಯ ತಹಸೀಲ್ದಾರರಾದ ಶರಣ ಮಲ್ಲಿಕಾರ್ಜುನ ವಡ್ಡನಕೇರೆ ಇವರಿಂದ ನೆರವೇರಿತು. ನಾಡಧ್ವಜಾರೋಹಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಜಹರ್ ಹುಸೇನ್ ಅವರಿಂದ ನೆರವೇರಿತು.

ಡಾ. ಕಾಮರಾಜ ಜಗ್ಗೆನವರ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಭಾಲ್ಕಿ ಹಾಗೂ ತಾಲೂಕಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಸವಿತಾ ಭೂರೆ ಅವರು ಸ್ವಾಗತಿಸಿದರು. ಬಾಬು ಬೆಲ್ದಾಳ ನಿರೂಪಿಸಿದರು. ಸಿದ್ರಾಮ ರಾಜಪೂರೆ ಶರಣು ಸಮರ್ಪಣೆ ಮಾಡಿದರು. ಮುಖ್ಯಗುರುಗಳು, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಹಿರೇಮಠ ಸಂಸ್ಥಾನದಿಂದ ಪುರಭವನದವರೆಗೆ ಕನ್ನಡಾಂಬೆಯ ಮೆರವಣಿಗೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here