ಕೆಎಸ್‍ಹೆಚ್‍ಸಿಓಇಎ ಸಂಘದ ಪ್ರತಿನಿಧಿತ್ವದಲ್ಲಿ ಒಂದು ವಾರದಲ್ಲಿ ಕುಂದುಕೊರತೆಗಳ ಸಭೆ; ಶಾಸಕ ಅಲ್ಲಮಪ್ರಭು ಪಾಟೀಲ್

0
262

ಕಲಬುರಗಿ: ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಜಿಲ್ಲಾ ಸಮಾವೇಶವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು.

ನಂತರ ಮಾತನಾಡಿ ಸಂಘಟನೆಯ ಸಾಧನೆ, ಸಂಘಟನೆಯ ಸನ್ಮಾನ ಸಮಾರಂಭವನ್ನು ನೋಡಿ ಬಹಳ ಸಂತೋಷ ವ್ಯಕ್ತಪಡಿಸಿ, ಸಂಘನೆಗಳು ಬೇಡಿಕೆ ಪತ್ರ ಗಳನ್ನು ನೋಡಿದ್ದೇನೆ ಆದರೆ ಇಷ್ಟೊಂದು ಬೇಡಿಕೆಗಳು ಈಡೇರಿಸಿಕೊಂಡಿದ್ದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಸಾಧನೆಯಾಗಿದ್ದು ಎಲ್ಲವೂ ಒಂದು ಹಂತದಲ್ಲಿ ನಿಲ್ಲಿಸಿ ಎಲ್ಲ ನೌಕರ ಸಮೂಹಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದು ಖುಷಿ ತಂದಿದೆ, ಈಗಾಗಲೇ ಕೊನೆ ಹಂತದಲ್ಲಿರುವ ಬೇಡಿಕೆಗಳು ಈಡೇರಿಕೆಗೆ ನಾನು ಖುದ್ದಾಗಿ ಕೆಎಸ್‍ಹೆಚ್‍ಸಿಓಇಎ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿಯವರ ಜೊತೆಗೂಡಿ ವಿಧಾನಸಭೆಯಲ್ಲಿ ಸಚಿವರ ಜೊತೆ ಮಾತಾಡುತ್ತನೆ ಹಾಗೂ ಮುಂದಿನ ದಿನಗಳಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದರು.

Contact Your\'s Advertisement; 9902492681

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಭವರ್ ಸಿಂಗ ಮೀನಾ ರವರರು ಮಾತನಾಡಿ ಕೆಎಸ್‍ಹೆಚ್‍ಸಿಓಇಎ ರಾಜ್ಯಾಧ್ಯಕ್ಷ ರಾದ ಶ್ರೀಕಾಂತ್ ಸ್ವಾಮಿ ರವರ ಪ್ರಸ್ಥಾಪನೆ ಯಂತೆನೌಕರರ ಸಮಸ್ಯೆಗಳನ್ನು ಆಲಿಸಲು ಸರ್ಕಾರದ ಆದೇಶದಂತೆ ಒಂದು ವಾರದಲ್ಲಿ ಕುಂದು ಕೊರತೆಗಳ ಸಭೆಯನ್ನು ಮಾಡುತ್ತೇನೆಂದು ತಿಳಿಸುತ್ತಾ ,ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ನೆಪವೊಡ್ಡಿ ನೌಕರರನ್ನು ವಜಾಗೊಳಿಸಬಾರದು ,ನೌಕರರ ನ್ನ ಉಳಿಸಿಕೊಂಡರೇನೇ ಈ ಸರಕಾರದ ಹಂತದಲ್ಲಿ ಕಾರ್ಯ ನಿರ್ವಹಿಸೋಕೆ ಅನುಕೂಲ ವಾಗುತ್ತೆ ,ವೇತನವಾಗದಂತೆ ನೋಡಿಕೊಳ್ಳಬೇಕು , ಇಎಸ್‍ಐ ಪಿಎಸ್ ಸರಿಯಾದ ರೀತಿ ನೌಕರರಿಗೆ ಪಾವತಿಸಬೇಕು ಎಂದು ತಿಳಿಸಿದರು.

ಇದೆ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ಯವರು ಮಾತನಾಡಿ ಈಗಾಗಲೇ ಕೆಎಸ್‍ಹೆಚ್‍ಸಿಓಇಎ ಸಂಘದಿಂದ ಹಲವಾರು ಬೇಡಿಕೆಗಳಾದ ಕೃಪಾಂಕ, ವಯೋಮಿತಿ ಸಡಿಲಿಕೆ, 15 ಪ್ರತಿಶತ ವೇತನ ಹೆಚ್ಚಳ,ಕನಿಷ್ಠ ವೇತನ,ವರ್ಗಾವಣೆ, ಈಡೇರಿಸಿಕೊಂಡಿದ್ದು ಇನ್ಸುರನ್ಸ್ ಮತ್ತು ವೈದ್ಯಕೀಯ ಚಿಕಿತ್ಸೆ ಇನ್ನು ಸರ್ಕಾರದ ಕೊನೆ ಹಂತದಲ್ಲಿ ಇದ್ದು , ಆಡಷ್ಟು ಬೇಗ ಈಡೇರಿಸಿಕೊಳ್ಳುತ್ತೇವೆ, ಎಲ್ಲ ನೌಕರರ ಜೀವನ್ ಮಟ್ಟ ಸುಧಾರಣೆಗೆ ಸಂಘ ಹಗಲಿರುಳು ಪರಿಶ್ರಮಿಸಲಿದೆ ಎಂದು ತಿಳಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ, ಕೆಎಸ್‍ಎಚ್‍ಸಿಒ ಇಎನ ಸಂಸ್ಥಾಪಕ ಅಧ್ಯಕ್ಷ ವಿಶ್ವರಾಧ್ಯ ಎಚ್, ಯಾಮೋಜಿ, ಶಂಕರ ಸೊಲೆಗಾಂವ, ವೆಂಕಟೇಶ ಸಿಂದಿಹಟ್ಟಿ, ಇಂದೇಶ, ರಮೇಶ ಸುಂಬಡ, ಡಾ. ರಾಜಶೇಖರ ಮಾಲಿ, ಡಾ. ಪ್ರಭುಲಿಂಗ ಮಾನಕ, ಡಾ. ಸಂದ್ಯಾ ಕಾನೇಕ. ಡಾ. ಅಂಬಾರಾಯ ರುದ್ರವಾಡಿ, ಡಾ. ರವಿಕಾಂತ ಕ್ಯಾತನಾಳ, ಡಾ. ಶರಣಬಸಪ್ಪ ಕ್ಯಾತನಾಳ, ಡಾ. ಸುರೇಶ ಮೇಕಿನ, ಡಾ. ರಾಜಕುಮಾರ ಕುಲಕರ್ಣಿ, ಡಾ. ಚಂದ್ರಕಾಂತರ ನರಿಬೋಳ, ಡಾ. ಶರಣಬಸಪ್ಪ ಭೂಸನೂರ, ಗೀತಾ ಕುಲಕರ್ಣಿ, ಶಿವರಾಜ ವಾರಿಕ ಸೇರಿ ಇತರರಿದ್ದರು.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ದಿಂದ ಹಮ್ಮಿಕೊಂಡ ಜಿಲ್ಲಾ ಸಮಾವೇಶದಲ್ಲಿ ಸರಿ ಸುಮಾರ 1000 ನೌಕರರು ಪಾಲೊಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here