ಕಲಬುರಗಿ: ‘ಗಧಾಗ್ರಜ ಫಿಲಂಸ್’ನ ಅಡಿಯಲ್ಲಿ ನಿರ್ಮಾಣ ವಾಗಿರುವ ‘ಪಾಶ’ ಕಿರುಚಿತ್ರ ಚಿತ್ರದ ಮೊದಲ ಪೋಸ್ಟರ್ ಅನ್ನು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 12ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಲಕ್ಷ್ಮೀಕಾಂತ ಜೋಶಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಕಿರುಚಿತ್ರದ ಕತೆ ಹಿರಿಯ ಸಾಹಿತಿ ಜೋಗಿ (ಗಿರೀಶರಾವ ಹತ್ವಾರ) ಅವರ ‘ಲೈಫ್ ಈಸ್ ಬ್ಯೂಟಿಫುಲ್’ ಎಂಬ ಕೃತಿಯ ಒಂದು ಕತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ರಂಗಭೂಮಿ ಕಲಾವಿದ & ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ಲಕ್ಷ್ಮೀಕಾಂತ ಜೋಶಿ ತಮ್ಮ ಚೊಚ್ಚಲ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಚಿತ್ರದ ಬಿಡುಗಡೆಯ ದಿನಾಂಕ ಕೆಲವು ದಿನಗಳ ನಂತರ ತಿಳಿಸಲಾಗುವುದು ಎಂದಿದ್ದಾರೆ.