ಕಲಬುರಗಿ: ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ ತನಿಖೆಗೆ ಸಚಿವರಿಗೆ ಮನವಿ

0
16

ಕಲಬುರಗಿ: ನಗರದ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ ನಡೆದಿದಕ್ಕೆ ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್, ಭಾಸಗಿ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಮನವಿ ಸಲ್ಲಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳ ಸಲುವಾಗಿ ಪ್ರತಿ ತಿಂಗಳು ಮಕ್ಕಳು ಮಕ್ಕಳ ಶಿಕ್ಷಣ ಕಿಟ್‍ಗಳು ಸರಬರಾಜು ಆಗುತ್ತಿದ್ದು, ಸುಮಾರು ದಿನಾಂಕ: 05-05-2023 ರಿಂದ 08-05-2023ರ ಒಳಗೆ ಇಲಾಖೆಯ ಅಧಿಕಾರಿಗಳು ತಮಗೆ ಬೇಕಾದ ಒಬ್ಬ ವ್ಯಕ್ತಿಯ ಹತ್ತಿರ ಸುಮಾರು 250 ಶಿಕ್ಷಣ ಕಿಟ್‍ಗಳನ್ನು ಒಬ್ಬನ ಹತ್ತಿರವೇ ನೀಡಿರುತ್ತಾರೆ.

Contact Your\'s Advertisement; 9902492681

ಶಿಕ್ಷಣ ಕಿಟ್‍ಗಳನ್ನು ವಿತರಿಸುವಾಗ ಆ ವ್ಯಕ್ತಿಯಿಂದ ಕಟ್ಟಡ ಕಾರ್ಮಿಕರ ಯಾವುದೇ ರೀತಿಯ ದಾಖಲೆಗಳನ್ನು ಕೂಡಾ ಪಡೆದಿರುವುದಿಲ್ಲ. ಅಲ್ಲದೆ ಆ ವ್ಯಕ್ತಿಯು ಯಾವುದೇ ಕಟ್ಟಡ ಕಾರ್ಮಿಕ ಮಕ್ಕಳಿಗಾಗಲಿ ಅವರ ಆ ವಿತರಿಸಿದರು.

ಕುಟುಂಬದವರಿಗಾಗಲಿ ಮಕ್ಕಳ ಶಿಕ್ಷಣ ಕಿಟ್‍ಗಳನ್ನು ವಿತರಿಸಿರುವುದಿಲ್ಲ ಮತ್ತು 2019ರಿಂದ 2022ರವರೆಗೆ ನಿಜವಾದ ಕಟ್ಟಡ ಕಾರ್ಮಿಕರಿಗೆ ಮದುವೆ ಧನಸಹಾಯ ನೀಡಿರುವುದಿಲ್ಲ ಹಾಗೂ ಇವರು ಯಾರು ಹೆಚ್ಚಿನ ಹಣ ನೀಡುತ್ತಾರೋ ಅವರಿಗೆ ಮಾತ್ರ ಯೋಜನೆಯನ್ನು ಜಾರಿ ಮಾಡುತ್ತಾರೆ. ಇದರಿಂದ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಅನ್ಯಾಯವಾದಂತಾಗಿದೆ. ಆದ್ದರಿಂದ ದಯಾಳುಗಳಾದ ತಾವು ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಒಬ್ಬ ಒಳ್ಳೆಯ ನಿಷ್ಠಾವಂತ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ರಾಮಾ ಪೂಜಾರಿ, ಹುಸೇನ, ಅನೀಲ ವಿದ್ಯಾನಗರ, ಮಲ್ಲಿಕಾರ್ಜುನ ಆಲಗೂಡ, ಆಕಾಶ ಚವ್ಹಾಣ, ಆನಂದ ಕೊಳ್ಳೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here