ಕಲಬುರಗಿ; ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ಮಟ್ಟದ ಶಾಲಾ ಮಕ್ಕಳ ಅಟೋಟ ಸ್ಪರ್ಧೆ 2023 24 ಸಾಲಿನ ದಿನಾಂಕ ಅಕ್ಟೋಬರ್ 29 ರಿಂದ 31 ರವರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಉತ್ತರಹಳ್ಳಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜೂಡೋ ಕಿಡಕೋಟದಲ್ಲಿ ಕಲಬುರಗಿಯ ಜಿಲ್ಲೆಯ ಜೋಡೋ ಕ್ರೀಡಾಪಟು ಭಾಗವಹಿಸಿ ಅತ್ಯುತ್ತಮವಾದ ಸಾಧನೆಯನ್ನು ತಮ್ಮ ಮೊಡಲಿಗೆ ಬಾಚಿಕೊಂಡಿದ್ದಾರೆ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜೂಡೋ ಕಿಡಕೋಟದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಿದ ಹ್ಯಾಪಿ ರಾಜ್ 14 ವರ್ಷದ ಪ್ರಥಮ ಸ್ಥಾನ, ಚಿತ್ರಲೇಖ ದ್ವಿತೀಯ ಸ್ಥಾನ, ಆರುಷಿ ದ್ವಿತೀಯ ಸ್ಥಾನ, ಶ್ರೇಯಸ್ ದ್ವಿತೀಯ ಸ್ಥಾನ, ಅಂಕಿತ್ ದ್ವಿತೀಯ ಸ್ಥಾನ, ರುದ್ರಾಕ್ಷಿ ತೃತೀಯ ಸ್ಥಾನ, ಷಡಕ್ಷರಿ ತೃತೀಯ ಸ್ಥಾನ, ಪ್ರಜ್ವಲ್ ದ್ವಿತೀಯ ಸ್ಥಾನ, ಅದಿತೃ ಧಿವಿತಿಯ ಹೀಗೆ ಒಟ್ಟು ಒಂಬತ್ತು ಪದಕಗಳನ್ನು ಪಡೆದು ಯಶಸ್ವಿಯಾಗಿದ್ದಾರೆ.
ಇದೇ ತಿಂಗಳು 11 ರಿಂದ 17ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಜುಡೋಸ್ಪರ್ಧ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದು ಕಲಬುರಗಿ ಜಿಲ್ಲೆಯ ಹ್ಯಾಪಿ ರಾಜ್ ಅವರು ಕಿಡ ಕೊಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರಿಗೆ ತರಬೇತಿದಾರರಾದ ಅಶೋಕ್ ಜೂಡೋ ತರಬೇತ್ತಿದಾರರು, ಶ್ರೀಲೇಖಾ ಜಾಧವ ಜೂಡೋ ತರಬೇತಿದಾರರು, ಇಲಾಖೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಶಿಕ್ಷಣ ಇಲಾಖೆಯ ನಿರ್ದೇಶಕರು, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹೃತ್ಪೂರ್ವಕವಾದ ಅಭಿನಂದನೆ ತಿಳಿಸಿದ್ದಾರೆ.