ಕಲಬುರಗಿ: ದಾಖಲೆ ಕೊಟ್ಟು ಭಗೋಳ್ರೊ ಸುಮ್ನೆ ಭಗೋದು ಅಲ್ಲ ದಾಖಲೆ ಕೊಡ್ರೊ ಯುಸ್ ಲೇಸ್ ಎಂದು ಕೆಇಎ ಪರೀಕ್ಷೆಯಲ್ಲಿ ಆಕ್ರಮ ನಡೆಸಿರುವ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಮಾಧ್ಯಮಗಳ ಮೇಲೆ ಹರಿಹಾಯ್ದಿರುವ ಘಟನೆ ನಡೆದಿದೆ.
ಶನಿವಾರ ನಗರದ ಆಶೋಕ ನಗರ ಪೊಲೀಸರು ಠಾಣೆಯಿಂದ ಆರ್.ಡಿ ಪಾಟೀಲ್ ಗೆ ಸ್ಥಳ ಮಹಾಜರ್ ನಡೆಸಲು ಕರೆದೊಯ್ಯುವ ವೇಳೆ ಪತ್ರಕರ್ತರ ಮೇಲೆ ಕೆಂಡ ಮಂಡಲವಾಗಿ ವರ್ತಿಸಿರುವ ಘಟನೆ ನಡೆದಿದೆ.
ದಾಖಲೆ ಕೊಟ್ಟು ಮಾತನಾಡ್ರೋ ಸುಮ್ನೆ ಭಗೋಳದಲ್ಲ ಬೆಡ್ರೋ ನಾನ್ಸ್ ಫೆಲೋಸ್ಸ್ ಎಂದು ಅಕ್ರೋಶ ಪಡೆಸುತ್ತಿದಂತೆ ಪೊಲೀಸರು ಆರ್.ಡಿ ಪಾಟೀಲ್ ನನ್ನು ಮುಂದೆ ಹಾಕಿಕೊಂಡು ಭದ್ರತೆಯಲ್ಲಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಿದರು.
ಮಧ್ಯಾಹ್ನ ಗಂಡನನ್ನು ನೋಡಲು ಪೊಲೀಸ್ ಠಾಣೆಗೆ ಬಂಧಿರುವ ಆರ್.ಡಿ ಪಾಟೀಲ್ ಪತ್ನಿ ಪತಿಯ ಸ್ಥಿತಿ ನೋಡಿ ಕಣ್ಣಿರು ಹಾಕಿದರು.
ಆರ್.ಡಿ ಪಾಟೀಲ್ ಪಿಎಸ್ಐ ನೇಮಕಾತಿಯಲ್ಲಿ ಆಕ್ರಮ ನಡೆಸಿರುವ ಆರೋಪದಲ್ಲಿ ಜೈಲು ಶಿಕ್ಷೆ ಒಳಗಾಗಿದ್ದು, ಜಾಮೀನು ಮೇಲೆ ಹೊರಡೆ ಇದ್ದ ಪಾಟೀಲ್ ಇತ್ತೀಚೆಗೆ ನಡೆದಿರುವ ಕೆಇಎ ಪರೀಕ್ಷೆಯಲ್ಲಿ ಆಕ್ರಮ ನಡೆಸಿರುವ ಆರೋಪದಲ್ಲಿ ತಲೆ ಮರಿಸಿಕೊಂಡದ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಶುಕ್ರವಾರ ಬಂಧಿಸಲಾಗಿದೆ.