ಕಲಬುರಗಿ: ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಅಭಿಮಾನ ಹೆಚ್ಚು ಹೆಚ್ಚು ಬೆಳೆಯಬೇಕೆಂದರೆ ಮಕ್ಕಳಲ್ಲಿ ಭಾಷೆ ಕ್ರಾಂತಿ ಯುಗದಲ್ಲಿ ಕನ್ನಡ ಹೆಚ್ಚು ಒತ್ತು ಕೊಡಬೇಕು ಕನ್ನಡ ಸಾಹಿತ್ಯ ಪರಿಷತ್ತು ಆದಿಕಾಲದಿಂದ ಕೆಲಸ ಮಾಡುತ್ತ ಬಂದಿದೆ. ಹಲವಾರು ಭಾಷೆಗಳು ನಮ್ಮ ಕನ್ನಡ ಪ್ರಭುತ್ವ ಸಾಧಿಸಲುಪಟ್ಟು ಅದರೆ ಇದು ಬಂದ ಅದರಿಂದಲೇ ಕನ್ನಡಕ್ಕೆ ಪ್ರಾಶಸ್ತ್ಯ ದೊರಕಿದೆ ಅಂದಿನಿಂದ ಇಂದಿನ ಯುಗದ ವರೆಗೆ ಕನ್ನಡ ಭಾಷದ ಮೇಲೆ ಪ್ರಭಾವಒಳ್ಳೆಯ ಹಿನ್ನೆಲೆ ಈ ನಮ್ಮ ಕನ್ನಡ ಭಾಷೆ ಪ್ರಸಾರಿಸಬೇಕಾಗಿದೆ ಹೀಗಾಗಿ ವಿದ್ಯಾರ್ಥಿಗಳು ಕನ್ನಡ ಶಾಲೆಯನ್ನು ಎತ್ತಿಹಿಡಿಯಬೇಕು ಎಂದು ವ್ಯವಸ್ಥಾಪಕರು ಕೆ.ಕೆ ಆರ್ ಟಿ ಸಿ, ಘಟಕ ಕಾಳಗಿಯ ಯಶವಂತ ಯಾತನೂರು ಹೇಳಿದರು.
ಕಾಳಗಿ ಪಟ್ಟಣದ ಶ್ರೀ ಚಾಮುಂಡೇಶ್ವರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಾಳಗಿಯ ಶಾಲೆಯ ಪ್ರಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸರಣಿ ಕಾರ್ಯಕ್ರಮ ” ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ” ಕಾರ್ಯಕ್ರಮ ಸಸಿಗೆ ನೀರೇರೆಯುವ ಮೂಲಕ ಉದ್ಘಾಟನೆಗೆ ಚಾಲನೆ ನೀಡಿ ಮಾತಾನಾಡಿದರು.
ಮೊದಲಿಗೆ ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು , ಪ್ರಾಸ್ತಾವಿಕ ನುಡಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂತೋಷ ಕುಡಳ್ಳಿ ಅವರು ನಡೆಸಿಕೊಟ್ಟರು. ಚಾಮುಂಡೇಶ್ವರಿ ಶಾಲೆ ಪ್ರಧಾನ ಅಧ್ಯಾಪಕರು ಹಾಗೂ ಅಧ್ಯಕ್ಷರು ರಮೇಶ್ ನಾಮದಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು ಕರ್ನಾಟಕದ ಜನರು ಮೂಲೆ ಇಂದ ಬಂದರು ನಮ್ಮ ಕನ್ನಡ ಶಾಲೆಯಲ್ಲಿ ವಿದ್ಯೆ ಕಲಿತು ಒಂದು ಉನ್ನತ ಸ್ಥಾನದಲ್ಲಿ ಇದ್ದರೆ ನಮ್ಮ ಶ್ರೀಗಳು ಒಳ್ಳೆಯ ವಾತಾವರಣ ಒಳ್ಳೆಯ ಶಿಕ್ಷಣ ಪಡೆದುಕೊಳ್ಳಲು ಇಲ್ಲಿ ವಸತಿ ನಿಲಯದ ವ್ಯವಸ್ಥೆ ಇದೆ ಇಲ್ಲಿ ಕಲಿತಂತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಬೆಳೆಯಲು ದಾರಿಯಾಗಿದೆ ಕನ್ನಡ ಮಾಧ್ಯಮಲ್ಲೆ ಕಲಿತು ಕಾಳಗಿಯ ಜನರು, ವಿದ್ಯಾರ್ಥಿಗಳು ಕನ್ನಡ ಉಳಿಸಿಕೊಂಡು ಹೋಗಲಿ ಇಂತಹ ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡು ಹೀಗೆ ಬರಲಿ ಎಂದು ಹೇಳಿದರು.
ವೇದಿಕೆ ಮೇಲೆ ಪ್ರಮುಖರಾದಸಾನಿಧ್ಯ ಶ್ರೀ ಅಜೀಜಬಾಬ ಬಡೆ ಹಜರತ್ ಬಾಬಾ. ಉಪನ್ಯಾಸ ನೀಡಲು ಬಂದ ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಶರಣಬಸವೇಶ್ವರ ವಿಶ್ವವಿದ್ಯಾಲಯ ಕಲಬುರಗಿಯ ಚನ್ನಮ್ಮ ಅಲ್ಬಾ. ಮುಖ್ಯ ಅತಿಥಿಗಳು ಜಿಲ್ಲಾ ಮಹಿಳಾ ಪ್ರತಿನಿಧಿ ಕಸಾಪ ಕಲಬುರಗಿಯ ಶಕುಂತಲಾ ಪಾಟೀಲ್ ಜವಳಿ. ನಿವೃತ್ತ ಕೃಷಿ ಸಹಾಯಕರು ಕಾಳಗಿ ಇಬ್ರಾಹಿಂ ಪಾಶಾ ಗಿರಣಿಕರ್, ಮಾಜಿ ಅಧ್ಯಕ್ಷರು ಮಹಾಶಕ್ತಿ ಕೇಂದ್ರ ಕಾಳಗಿ ರಮೇಶ್ ಕಿಟ್ಟದ,ಅತಿಥಿಗಳಾದ ಎಸ್ ಎಸ್ ( ಟಿ ವಿ )ದೂರದರ್ಶನ ವರದಿಗಾರ ರಮೇಶ್ ತೇಲಿ,ಕಾರ್ಯದರ್ಶಿ ಯುವ. ಕ .ರ.ಸೇನೆ ಕಾಳಗಿ ಅನೀಲ ಗುತ್ತೆದಾರ, ಹಾಸ್ಯ ಕಲಾವಿದ ರೇವಣಸಿದ್ದಪ್ಪ ದುಕಾನ. ಸನ್ಮಾನಿತರು ಖ್ಯಾತ ಕವಿಗಳು ಹಾಗೂ ಸಾಹಿತಿಗಳು ಬಸಯ್ಯಾ ಪ್ಯಾಟಿಮಠ, ತಾಂತ್ರಿಕ ಸಹಾಯಕ ಕಾಳಗಿ ರಮೇಶ, ದೇವನಂದ, ಕಿರಿಯ ಸಹಾಯಕರು ಕಾಳಗಿ ಮಹಾದೇವ, ಕ ಕ ರಾ ರ ಸಾ. ಚಾಲಕರು ಕಾಳಗಿಶಿವಾನಂದ, ಕ ಕ ರಾ ರ ಸಾ. ನಿರ್ವಾಹಕರು ಕಾಳಗಿ ಸಿದ್ದಲಿಂಗ. ಹಾಗೂ ಗೌರವ ಕಾರ್ಯದರ್ಶಿ ಯಾಲ್ಲಾಲಿಂಗ್ ಪಾಟೀಲ್ , ಸತೀಶ್ ಚಂದ್ರ ಸುಲೇಪೇಟ್, ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಬಾಬು , ಗೌರವ ಕೋಶಾಧ್ಯಕ್ಷರು ಶ್ರೀಕಾಂತ್ ಕದಂ, ಮಹಿಳಾ ಪ್ರತಿನಿಧಿಗಳಾದ ಸುಧಾರಾಣಿ ಚಿದ್ರಿ , ಸುಲೋಚನ ರಾಥೋಡ್ ಹಾಗೂ ಶ್ರೀ ಚಾಮುಂಡೇಶ್ವರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಾಳಗಿ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇತರರು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.