ಕಲಬುರಗಿ: ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ.ಮಹಿಳಾ ಕಾಲೇಜು ಮತ್ತು ಹೈದರಾಬಾದ್‍ನ ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾ (ಐಸಿಎಐ) ಸಂಸ್ಥೆಯೊಂದಿಗೆ ಗುರುವಾರ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಕೇಂದ್ರ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಐಸಿಎಐ ಸಂಸ್ಥೆ ದೇಶದ ಅತಿ ದೊಡ್ಡ ಲೆಕ್ಕ ಪತ್ರ ಸಂಸ್ಥೆಯಾಗಿದ್ದು, ಈ ಒಡಂಬಡಿಕೆಯಿಂದ ಕಾಲೇಜಿಗೆ ಬಹುಪಯೋಗಗಳಿವೆ ಎಂದು ಉಪಪ್ರಾಂಶುಪಾಲೆ ಉಮಾ ರೇವೂರ ತಿಳಿಸಿದರು. ಒಪ್ಪಂದದ ಭಾಗವಾಗಿ ಕಾಲೇಜು..ಮತ್ತು ಸಂಸ್ಥೆಯೊಂದಿಗೆ ಆಶ್ರಯದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುವ ಜತೆಗೆ ವಿನಿಮಯಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಐಸಿಎಐ ಶೈಕ್ಷಣಿಕ ವಿಭಾಗದ ಉಪಾಧ್ಯಕ್ಷ ದಾಯನಿವಾಸ ಶರ್ಮಾ, ಚಾರ್ಟೆಡ್ ಅಕೌಂಟೆಡ್ ಮಲ್ಲಿಕಾರ್ಜುನ ಮಹಾಂತಗೋಳ, ಉಪಪ್ರಾಂಶುಪಾಲೆ ಉಮಾ ರೇವೂರ, ಉಮಾದೇವಿ ಮುಟಗಿ, ಸಂಗಮೇಶ ತುಪ್ಪದ್ ಇತರರಿದ್ದರು.