ಪದವೀಧರ ಮತದಾರರ ಪಟ್ಟಿಯಲ್ಲಿ ಕ್ಷೇತ್ರದಾದ್ಯಂತ 1,40,423 ಜನ ನೋಂದಣಿ; ಕೃಷ್ಣ ಭಾಜಪೇಯಿ

0
97

ಕಲಬುರಗಿ; ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಕರಡು ಪಟ್ಟಿ ಬುಧವಾರ ಪ್ರಕಟಗೊಂಡಿದ್ದು, ಕ್ಷೇತ್ರದಾದ್ಯಂತ ನವೆಂಬರ್ 6ರ ವರೆಗೆ 89,162 ಪುರುಷರು, 51,241 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟಾರೆ 1,40,423 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾಗಿರುವ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಹೆಸರು ನೊಂದಾಯಿಸುವಂತೆ ಮನವಿ: ದಿ.01.11.2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಪದವಿ ಉತ್ತೀರ್ಣದ ಅಂಕಪಟ್ಟಿ, ವಾಸ್ಥಳದ ಪುರಾವೆಗೆ ಆಧಾರ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಅಥವಾ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಮತದಾರರ ನೊಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕದ ವರೆಗೂ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 6ರ ವರೆಗೆ ನಮೂನೆ 18ರಲ್ಲಿ 1,42,928 ಅರ್ಜಿ ಸಲ್ಲಿಸಿದ್ದು, ಇದರಲ್ಲಿ 1,40,423 ಅರ್ಜಿ ಸ್ವೀಕೃತವಾದರೆ 2,452 ಅರ್ಜಿ ತಿರಸ್ಕøತವಾಗಿವೆ ಎಂದು ವಿವರಿಸಿದರು.

Contact Your\'s Advertisement; 9902492681

ಕರಡು ಮತದಾರರ ಪಟ್ಟಿಯನ್ನು ಇಂದು ಸಾರ್ವಜನಿಕವಾಗಿ ಮತದಾರರ ನೋಂದಣಾಧಿಕಾರಿ, ಸಹಾಯಕ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು www.ceo.karnataka.gov.in ರಲ್ಲಿ ಪ್ರಕಟಿಸಲಾಗಿದೆ. ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರ ವರೆಗೆ ಅವಕಾಶ ನೀಡಲಾಗಿದೆ. ಸ್ವೀಕೃತ ಅಕ್ಷೇಪಣೆಯನ್ನು ಡಿಸೆಂಬರ್ 25 ರೊಳಗೆ ವಿಲೇವಾರಿ ಮಾಡಿ ಮತದಾರರ ಅಂತಿಮ ಪ್ರಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಕುರಿತು ವಿವರಿಸಿದರು.

ಕಲಬುರಗಿಯಲ್ಲಿ ಹೆಚ್ಚು,ಕೊಪ್ಪಳದಲ್ಲಿ ಕಡಿಮೆ ನೋಂದಣಿ: ಕರಡು ಪಟ್ಟಿಯಂತೆ ಕ್ಷೇತ್ರದ ಜಿಲ್ಲಾವಾರು ಅಂಕಿ ಸಂಖ್ಯೆ ನೋಡುವುದಾದರೆ ಕಲಬುರಗಿ ಜಿಲ್ಲೆಯಲ್ಲಿ 21,197 ಪುರುಷ, 14,644 ಮಹಿಳೆ, ಇತರೆ-5 ಸೇರಿ 35,846 ಅತಿ ಹೆಚ್ಚು ಜನ ನೋಂದಣಿಯಾದರೆ, ಕೊಪ್ಪಳ ಜಿಲ್ಲೆಯಲ್ಲಿ 8,328 ಪುರುಷ, 4,143 ಮಹಿಳೆ ಸೇರಿ 12,471 ಜನ ಅತಿ ಕಡಿಮೆ ನೋಂದಣಿಯಾಗಿದೆ.

ಉಳಿದಂತೆ ಬೀದರ ಜಿಲ್ಲೆಯಲ್ಲಿ 15,829 ಪುರುಷ, 9,660 ಮಹಿಳೆ ಸೇರಿ 25,489, ಬಳ್ಳಾರಿ ಜಿಲ್ಲೆಯಲ್ಲಿ 11,061 ಪುರುಷ, 6,658 ಮಹಿಳೆ, ಇತರೆ-4 ಸೇರಿ 17,723, ರಾಯಚೂರು ಜಿಲ್ಲೆಯಲ್ಲಿ 12,285 ಪುರುಷ, 6,076 ಮಹಿಳೆ, ಇತರೆ-5 ಸೇರಿ 18,366 ಯಾದಗಿರಿ ಜಿಲ್ಲೆಯಲ್ಲಿ 9,896 ಪುರುಷ, 4,395 ಮಹಿಳೆ, ಇತರೆ-4 ಸೇರಿ 14,295 ಹಾಗೂ ವಿಜಯನಗರ ಜಿಲ್ಲೆಯಲ್ಲಿ 10,566 ಪುರುಷ, 5,665 ಮಹಿಳೆ, ಇತರೆ-2 ಸೇರಿ 16,233 ಜನ ಕರಡು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಕಲಬುರಗಿಯಲ್ಲಿ ಹೆಚ್ಚು 934 ಮತ್ತು ಕೊಪ್ಪಳದಲ್ಲಿ ಕಡಿಮೆ 42 ಅರ್ಜಿಗಳು ತಿರಸ್ಕೃತವಾಗಿವೆ. ಇನ್ನೂ ಕ್ಷೇತ್ರದಲ್ಲಿ ಒಟ್ಟಾರೆ 160 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಕೃಷ್ಣ ಭಾಜಪೇಯಿ ಮಾಹಿತಿ ನೀಡಿದರು.

ಮತದಾರರ ನೋಂದಣಿ ನಿರಂತರ,ವಿಶೇಷ ಅಭಿಯಾನ ಯೋಜನೆ: ಈಶಾನ್ಯ ಪದವೀಧರ ಕ್ಷೇತ್ರದ ವ್ಯಾಪ್ತಿ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ವ್ಯಾಪ್ತಿ ಒಳಗೊಂಡಿದ್ದು, ಪ್ರಸ್ತುತ ಕ್ಷೇತ್ರದ ಚುನಾಯಿತ ಸದಸ್ಯರ ಅವಧಿ ಮುಂದಿನ ಜೂನ್-2024ರ ವರೆಗೆ ಇದೆ. ಇನ್ನು ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಅಂದರೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕದ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಯುವ ಪದವೀಧರ ಮತದಾರರನ್ನು ನೊಂದಣಿಗೆ ಉತ್ತೇಜಿಸಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು. ಚುನಾವಣೆ ಹೊತ್ತಿಗೆ ನೋಂದಣಿ ಸಂಖ್ಯೆಯನ್ನು 2.50 ಲಕ್ಷ ವರೆಗೆ ಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ ಎಂದ ಅವರು ಈ ಹಿಂದೆ 2017ರಲ್ಲಿ ಕರಡು ಪಟ್ಟಿಯಲ್ಲಿ 45,800 ಮತ್ತು ಅಂತಿಮ ಮತದಾರರ ಪಟ್ಟಿಯಲ್ಲಿ 82,054 ಜನ ನೋಂದಣಿ ಮಾಡಿಕೊಂಡಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ ಇಸಾಮದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here