ಸಿರಿಧಾನ್ಯಗಳ ಉಪಯೋಗದಿಂದ ದೈಹಿಕ-ಮಾನಸಿಕ ಸಮೃದ್ಧಿ: ಗಂಜಗಿರಿ

0
113

ಚಿಂಚೋಳಿ : ಪ್ರಸ್ತುತ ದಿನಮಾನಗಳಲ್ಲಿ ಯುವಕರು ಎಳೆವಯಸ್ಸಿನ ಮಕ್ಕಳು ಚೈನಿಸ್ ಆಹಾರ ಮೊರೆ ಹೋಗುತ್ತಿರುವುದರಿಂದ ದೈಹಿಕವಾಗಿ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದಾರೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ಕ್ಯಾನ್ಸರ್ ರಂತಹ ಭಯಾನಕ ರೋಗಕ್ಕೆ ತುತ್ತಾಗಿ ನರಳುತ್ತಿದ್ದಾರೆ ಇದರಿಂದ ಹೋರ ಬರಬೇಕಾದರೆ ಸಿರಿಧಾನ್ಯಗಳ ಉಪಯೋಗ ಮಾಡುವುದು ಅನಿವಾರ್ಯವಾಗಿದೆ ಎಂದು ಸಾಮಾಜಿಕ ಚಿಂತಕ ಹೋರಾಟಗಾರ ಮಾರುತಿ ಗಂಜಗಿರಿ ತಿಳಿಸಿದರು.

ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದ ಕಿತ್ತೂರಾಣಿ ಚೆನ್ನಮ್ಮ ಜ್ಞಾನವಿಕಾಸ ಕೇಂದ್ರದದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಸಿರಿಧಾನ್ಯ ಬಳಕೆಯಿಂದ ಆಗುವ ಪ್ರಯೋಜನ ಕುರಿತು ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದರಿಂದ ಮನುಷ್ಯರಿಗೆ ಮಕ್ಕಳಿಗೆ ಯಾವುದೇ ರೋಗ ಬರದೆ ಮಾನಸಿಕ ದೈಹಿಕವಾಗಿ ಸದೃಡರಾಗುತ್ತಾರೆ. ಸಮಾಜದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ನೊಂದವರ ಬೆಂದವರ ಕಣ್ಣಿರೊರಸುವ ಸಮಾಜ ಸೇವೆ ಮಾಡುವವರ ಜನ್ಮದಿನಾಚರಣೆಯಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬದ ಆಚರಣೆಗಳು ಯಾವುದೊ ಸ್ವಂತ ಲಾಭಿಗಾಗಿ ನಡೆಯುತ್ತಿರುವುದು ವಿಷಾಧನೀಯವಾಗಿದೆ ಎಂದರು.

ನಂತರ ಯೋಜನಾಧಿಕಾರಿಗಳಾದ ಗೋಪಾಲ ರವರು ಪೂಜ್ಯ ಹೆಗ್ಗಡೆಯವರು ಅನುಷ್ಠಾನಿಸಿದ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೋಭಾ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಒಕ್ಕೂಟದ ಅಧ್ಯಕ್ಷರು ಮತ್ತು ಮಾಹದೇವಿ ಆಂನೇಯ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here