ಕೊಪ್ಪಳ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಾಡಿನಲ್ಲಿ ಆಚರಿಸುವ ಸರಕಾರಿ ಉತ್ಸವ ಜೊತೆಗೆ ಸಂಘ-ಸಂಸ್ಥೆಗಳು ಮಾಡುವ ಜಿಲ್ಲಾ ಉತ್ಸವ, ಸಾಂಸ್ಕøತಿಕÀ ಕಾರ್ಯಕ್ರಮಗಳಿಗೆ ಸರಕಾರದ ಅನುದಾನದ ಮೂಲಕ ನೆರವು ನೀಡಬೇಕಾದ ಅಗತ್ಯವಿದೆ ಎಂದು ಹಿರಿಯ ರಂಗಕರ್ಮಿ ಕೆ. ಎಲ್. ಕುಂದರಿಗಿ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಸಿರಿಗನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಸಾಂಸ್ಕøತಿಕ ಪರಂಪರೆÀಯನ್ನು ಉಳಿಸಿ ಬೆಳೆಸುವಲ್ಲಿ ಸಂಘ-ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಮೌಲ್ಯಯುವಾಗಿರುತ್ತವೆ ಹಾಗೂ ಸಮಾಜಕ್ಕೆ ಸಂದೇಶವನ್ನು ನೀಡುವ ಗುರುತರವಾದ ಜವಾಬ್ಬಾರಿಯನ್ನ ಹೊಂದಿರುತ್ತವೆ, ಆದ್ದರಿಂದ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಇಲಾಖೆಯು ಧನ ಸಹಾಯವನ್ನು ನೀಡುವದ್ದನ್ನ ಮುಂದುವರಿಸಿ ಬೇಕೆಂದರು. ಸಿರಿಗನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಮಹೇಶಬಾಬು ಸುರ್ವೆ ಮಾತನಾಡಿ, ಜಿಲ್ಲೆಯು ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಶ್ರೀಮಂತವಾದ ನಾಡು. ಈ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ನಾವು ಸಾಹಿತ್ಯ, ನಾಡು, ನುಡಿ, ಭಾಷೆಯ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಕೊಪ್ಪಳ ಜಿಲ್ಲೆಯ ಹರಿಕಾರರಾದಂತಹ ಜೆ.ಎಚ್. ಪಟೇಲರ ಪ್ರತಿಮೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಅನಾವರಣಗೊಳಿಸುವ ಯೋಜನೆಯನ್ನು ಹಾಕಿಕೊಂಡು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸುದಾಗಿ ಹೇಳಿದರು.
ಜಿ. ಎಸ್. ಗೋನಾಳ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ಮಹೇಶಬಾಬು ಸುರ್ವೆ ಅವರ ಅಭಿನಂದನಾ ಗ್ರಂಥ ಸಾಂಸ್ಕøತಿಕ ದಂಡನಾಯಕವನ್ನು ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ ಬಿಡುಗಡೆಗೊಳಿಸಿ ಮಾತನಾಡಿ, ಕೊಪ್ಪಳವು ಸಾಂಸ್ಕøತಿಕವಾಗಿ ಮುಂದುವರೆದ ಜಿಲ್ಲೆಯಾಗಿದ್ದು ನಾಡಿನ ಪರಂಪರೆಯನ್ನ ಬೆಳೆಗಿಸುವಲ್ಲಿ ಮುಂಚೂಣಿಯಲ್ಲಿ ಇದೆ ಎಂದರು.
ಸಮ್ಮೇಳನ ಸರ್ವಾಧ್ಯಕ್ಷರ ಭಾಷಣದ ಪ್ರತಿಯನ್ನ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಂಮತಪ್ಪ ಅಂಡಗಿ ಚಿಲವಾಡಗಿ ಸಮ್ಮೇಳನಾ ಅಧ್ಯಕ್ಷರ ಕುರಿತು ಮಾತನಾಡಿ, ಮಹೇಶಬಾಬು ಸುರ್ವೆ ಅವರು ಸಾಹಸಿ ಸಂಘಟಕರು. ಸರಳ ವ್ಯಕ್ತಿತ್ವದ ಸೇಹಜೀವಿಗಳಾದ ಇವರು, ನಿರಂತರ ಪ್ರಯತ್ನವಾದಿಗಳು ಮತ್ತು ಬಹುಮುಖ ಪ್ರತಿಭೆ ಉಳ್ಳವರು. ದೇವಾಲಯ ಚಕ್ರವರ್ತಿ, ನೋಡಬನ್ನಿ ಶಿಲ್ಪಕಲಾ ಸೌಂದರ್ಯ, ಅಣ್ಣನಿಗೆ ಅಕ್ಷರ ನಮನ, ಕರ್ನಾಟಕ ಚೇತನ ಡಾ. ರಾಜಕುಮಾರ, ಕರ್ನಾಟಕ ಐಸಿರಿ ಎಂಬ ಗ್ರಂಥಗಳನ್ನು ಬರೆದು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಿರಿಗನ್ನಡ ವೇದಿಕೆಯ ರಾಜ್ಯ ಅಧ್ಯಕ್ಷರಾದ ಎಮ್. ಎಸ್. ವೆಂಕಟರಾಮಯ್ಯ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕೊಪ್ಪಳದಲ್ಲಿ ಸಿರಿಗನ್ನಡ ಪ್ರಥಮ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಮಹದೇವ ದೇವರು, ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯರು, ದದೇಗಲ್ ಸಿದ್ದರೂಡ ಮಠದ ಆತ್ಮಾನಂದಭಾರತಿ ಮಹಾಸ್ವಾಮಿಗಳು, ಜಿಗರಳ್ಳಿ ಬಸವಪೀಠದ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಎಲ್.ಕುಂದರಿಗಿ, ಪ್ರೇಮಾ ಗುಳೇದಗುಡ್ಡ, ವೈ.ಬಿ.ಜೂಡಿ, ವಿರೇಶಕುಮಾರ ಬೆಟಗೇರಿ, ಗುಬ್ಬಿ ವಿರೇಶ ಇನ್ನೂ ಇತರರಿಗೆ ಪಿ.ಬಿ. ದುತ್ತರಿಗಿ ರಂಗ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷರಾದ ರಾಜಶೇಖರ ಅಂಗಡಿ, ನಾಗರಿಕ ವೇದಿಕೆಯ ಗೌರವ ಅಧ್ಯಕ್ಷರಾದ ಎಂ. ಬಿ. ಅಳವಂಡಿ, ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಸಾಹಿತಿ ಡಾ. ರಾಜೇಂದ್ರ ಗಡಾದ ಗದಗ, ಪತ್ರಕರ್ತರಾದ ಎಮ್. ಸಾಧಿಕ್ ಅಲಿ, ಶಿವಕುಮಾರ ಹಿರೇಮಠ, ಬಸವರಾಜ ಸಿನ್ನೂರು ಯಾದಗಿರಿ, ಪ್ರಭು ರತ್ನಾಕರ ಜೇವರ್ಗಿ, ವಿ. ಆರ್, ತಾಳಿಕೋಟಿ, ಮಂಜುನಾಥ ಅಂಗಡಿ ಕುಕನೂರು, ಜಾನಪದ ಸಂಘಟಕ ಪ್ರಕಾಶ ಕನ್ನಳ್ಳಿ. ಸಿ.ಪಿ.ಐ. ಮಹಾಂತೇಶ ಸಜ್ಜನ್, ಉಮೇಶ ಪೂಜಾರ, ವೈಷ್ಣವಿ ಹುಲಗಿ, ವಿಜಯಲಕ್ಷ್ಮಿ ಕೊಟಗಿ, ಅನ್ನಪೂರ್ಣ ಮನ್ನಾಪುರ, ಸುಶೀಲಾ ಸುರ್ವೆ ಇನ್ನಿತರರು ಇದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಗವಿಸಿದ್ದಪ್ಪ ಕೊನಸಾಗರ ಪ್ರಾರ್ಥಿಸಿದರು. ಮಂಜುನಾಥ ಚಿತ್ರಗಾರ ನಿರೂಪಿಸಿದರು.
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಎಸ್. ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲಪ್ಪ ಕವಳಕೇರಿ ಸ್ವಾಗತಿಸಿದರು. ಶರಣಪ್ಪ ಜಿಗಳೂರು ವಂದಿಸಿದರು.