ಕಲಬುರಗಿ: ಯಾವುದೇ ರೋಗ ಬಂದರೇ ಮೊದಲು ಆರ್ಯುವೇದ ಚಿಕಿತ್ಸೆ ತೆಗೆದುಕೊಳ್ಳಬೇಕು. ವಿವಿಧ ಗಿಡಮೂಲಿಕೆಯಿಂದ ತಯಾರಿಸಿದ ಔಷಧಿಗೆ ಭಯಾನಕ ರೋಗ ವಾಸಿ ಮಾಡುವ ಗುಣ ಹೊಂದಿದೆ. ರೋಗಿ ಗುಣಮುಖವಾಗಿ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ಆರ್ಯುವೇದ ಚಿಕಿತ್ಸಾ ಪದ್ಧತಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂದು ಆಯುರ್ವೇದ ತಜ್ಞರು ಹಾಗೂ ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾದ ಡಾ.ವಸುಂದರಾ ಭೂಪತಿ ಹೇಳಿದರು.
ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಮಾತನಾಡಿದರು. ಯಾವುದೇ ಆಹಾರ ಸೇವನೆ ಮಾಡುವಾಗ ಹಿತ್‌ಬುಕ್, ಮಿತ್‌ಬುಕ್ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂದರೆ ಹಸಿವು ಇದ್ದಷ್ಟು ಮಾತ್ರ ಸಾತ್ವಿಕ ಆಹಾರ ಸೇವಿಸಬೇಕು ಎಂದರು. ಸಕ್ಕರೆ, ಮೈದಾ, ಉಪ್ಪು ದೇಹಕ್ಕೆ ಹಾನಿಕಾರಕವಾಗಿದೆ. ಇವು ಹೆಚ್ಚು ಸೇವಿಸುವದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆದರೆ ನೆಲ್ಲಿಕಾಯಿ ಸೇವನೆ ಮಾಡುವದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕ್ಯಾನ್ಸರ್ , ಎಚ್‌ಐವಿ ಸೇರಿದಂತೆ ವಿವಿಧ ಮಹಾಮಾರಿ ರೋಗಕ್ಕೆ ಆಯುರ್ವೇದಲ್ಲಿ ಚಿಕಿತ್ಸೆ ಲಭ್ಯವಿದೆ. ಆದರೆ ಸಂಪೂರ್ಣ ಗುಣಮುಖವಾಗುವದಿಲ್ಲ. ಬದಲಾಗಿ ರೋಗ ನಿಯಂತ್ರಣ ಮಾಡಬಹುದಾಗಿದೆ ಎಂದು ತಿಳಿಸಿದರು.
ನಕಲಿ ವೈದ್ಯರ ಹಾವುಳಿ: ಅಸ್ತಮಾ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗೆ ಆಯುರ್ವೇದಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಆಯುರ್ವೇದದ ನಕಲಿ ವೈದ್ಯರು ಗಿಡಮೂಲಿಕೆ ಔಷಧಿಯಲ್ಲಿ ಸ್ಟಿರಡ್ ಬಳಸಿ ರೋಗಿಗೆ ಕೊಡುತ್ತಾರೆ. ಆದರೆ ರೋಗ ಗುಣಮುಖವಾಗುವ ಬದಲು ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಇದರಿಂದ ಇಂತಹ ನಕಲಿ ವೈದ್ಯರು ಕಂಡು ಬಂದರೆ ತಕ್ಷಣ ಗ್ರಾಹಕ ವೇದಿಕೆಗೆ ದೂರು ನೀಡಿ. ಅಂತವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ನಿರೂಪಿಸಿದರು. ವಿವಿ ಕುಲಸಚಿವ ಡಾ. ಅನೀಲ ಕುಮಾರ ಬಿಡವೆ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಕ್ಯಾಲಿರ್ಫೊನಿಯದ ಸೊನಮ್ ರಾಜ್ಯ ವಿಶ್ವವಿದ್ಯಾಲಯದ ಎಲೆಟ್ರಿಕಲ್ ಸೈನ್ಸ್‌ಸದ ಅಧ್ಯಕ್ಷ ಡಾ. ಫರಿದ್ ಫಾರಹ್ಮದ್, ಐರಲ್ಯಾಂಡ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ಮಾರಟೀನ್ ಸೆರಾನೊ, ಶಿವುಕುಮಾರ ಮಠಪತಿ ಇದ್ದರು.