ಕಲಬುರಗಿ: ಇಲಾಖಾ ವ್ಯಪ್ತಿಯಲ್ಲಿ ಗೌರವಧನ ಆಧಾರದ ಮೇಲೆ ಕಾಯ೯ನಿವ೯ಹಿಸುತ್ತಿರುವ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಅವರು ಇಲ್ಲಿನ ಸರಕಾರಿ ಅಂಧ ಪ್ರೌಢಯ ಆವರಣಕ್ಕೆ ನುಗ್ಗಿ ಹಾಸ್ಟೆಲ್ ವಾರ್ಡನ್ ಮತ್ತು ಶಾಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಅವ್ಯಾಚ್ಚ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ರಂಪಾಟ ಮಾಡಿರುವ ಘಟನೆ ಸೋಮವಾರ ನಡೆದಿದ್ದು. ವಿಡಿಯೋ ವೈರಲ್ ಆಗಿದೆ.
ನಗರದ ಐವನ್ ಶಾಹಿ ಪ್ರದೇಶದಲ್ಲಿ ಇರುವ ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆಯ ಕಾರ್ಯನಿರತ ಸಿಬ್ಬಂದಿ ಹಾಗೂ ಅಂಧ ಹಾಸ್ಟಲ್ ವಾರ್ಡನ್ ಸೇರಿ ಶಾಲಾ ಮಕ್ಕಳಿ ಎದುರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಸಿಬ್ಬಂದಿ ಹಾಗೂ ಮಕ್ಕಳಿಗಳಿಗೆ ಭಯದ ವಾತವರಣ ನಿರ್ಮಿಸಿರುವ ಮೇಟಿ ಅವರ ಬಂಧನಕ್ಕೆ ಶಾಲಾ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಘಟನೆಯ ವಿವರ: ಅಂಗವಿಕಲರ ಕಲ್ಯಾಣ ಇಲಾಖಾ ವ್ಯಪ್ತಿಯಲ್ಲಿ ಗೌರವಧನ ಆಧಾರದ ಮೇಲೆ ಕಾಯ೯ನಿವ೯ಹಿಸುತ್ತಿರುವ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಮತ್ತು ದತ್ತಾತ್ರೇಯ ಕುಡಕಿ ದುಷಚಟಕ್ಕೆ ಬಲಿಯಾದ ನಾಲ್ವರು ಬಾಲಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಸುದ್ದಿಗೊಷ್ಠಿಯಲ್ಲಿ ಒತ್ತಾಯಿಸಿ ಪ್ರತಿಭಟನೆ ಎಚ್ಚರಿಕೆ ನೀಡಿರುವ ವಿಚಾರವಾಗಿ ಸೋಮವಾರ ಶಾಲೆಯ ಆವರಣದೊಳಗೆ ಪ್ರವೇಶಿಸಿದಾಗ ಶಾಲಾ ಮಕ್ಕಳು ನಾಲ್ವರ ಬಾಲಕರ ದುಷಚಟಗಳನ್ನು ಹೇಳುತ್ತಿದ್ದಾಗ ಅಂಬಾಜಿ ಮೇಟಿ ಉದ್ರೇಕಗೊಂಡು ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ನಿಂದಿಸಿ ದರ್ಪತೊರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಶಾಲೆಯ ಅಂಧ ಹಾಸ್ಟೆಲ್ ವಾರ್ಡನ್ ಸರಕಾರಿ ನೌಕರರಾದ ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಭಜಂತ್ರಿಗೆ ಶಾಲೆಯ ಸಮಸ್ತ ಅಂಧ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿರುವುದಾಗಿ ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಇ ಮೀಡಿಯಾ ಲೈನ್ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸರಕಾರಿ ಅಂಧ ನೌಕರರಾದ ನಮಗೆ ಕರ್ತವ್ಯ ನಿರ್ವಹಿಸಲು ಅಡಚಣೆ ಮಾಡುತ್ತಿರುವುದರಿಂದ ದಿನನಿತ್ಯ ಶಾಲೆಗೆ ಬರುಲು ಆತಂಕ ಸೃಷ್ಟಿತಾಗಿದೆ. ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ ಎಂದು ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದು ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ದೊಡ್ಡ ದೊಡ್ಡ ರಾಜಕೀಯ ಮುಖಂಡರ ಹಾಗೂ ವಿವಿಧ ಸಂಘಟನೆಗಳ ಹೆಸರು ಹೇಳಿಕೊಂಡು ಇಲಾಖೆಯ ಸಿಬ್ಬಂದಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪಗಳು ಇವರ ಮೇಲಿದೆ. ಸಂಘದ ಅಧ್ಯಕ್ಷರಾಗಿರುವುದು ಅನಧಿಕೃತ ಕೆಲಸಕ್ಕಾಗಿ ಬಳಸಿಕೊಳುವ ಮೂಲಕ ಸಿಬ್ಬಂದಿಗಳಿಗೆ ಪ್ರತಿಭಟನೆ ಹೋರಾಟದ ಬೆದರಿಕೆ ಹಾಕಿ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡೆಸುತ್ತಿದ್ದಾರೆ. ಘಟನೆ ಕುರಿತು ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಆದೇಶದಂತೆ ಕ್ರಮಕೈಗೊಳ್ಳಲಾಗುವುದು. – ಸಾದಿಕ್ ಹುಸೇನ್ ಖಾನ್. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಲಬುರಗಿ.