ಚಿತ್ತಾಪುರ: ರೈಲ್ವೆ ಖಾಸಗೀರಣ ನಿಲ್ಲಿಸಬೇಕು ಹಾಗೂ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಎಸ್.ಯು.ಸಿ.ಐನ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ಸ್ಟೇಷನ್ ಮಾಸ್ಟರ್ ಮೂಲಕ ರೈಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಮ್ರೇಡ್ ಶರಣು ಹೇರೂರ್, ಗೌತಮ ಪರತೂರಕರ್, ಗೋಧಾವರಿ ಕಾಂಬ್ಳೆ, ಶರಣು ದೋಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಎಂ.ಡಿ ಮಶಾಖ ಚಿತ್ತಾಪುರ