ಕಲಬುರಗಿ: 371ನೇ(ಜೆ) ಕಲಂ ಮೀಸಲಾತಿಗೆ ಸಂಬಂಧಿಸಿದಂತೆ, ದಿನಾಂಕ : 1.2.23 ರ ಸುತ್ತೋಲೆ ಕೆ.ಎ.ಟಿಯಲ್ಲಿ ರದ್ಧಾಗಿರುವುದರಿಂದ ಕಲ್ಯಾಣ ಕರ್ನಾಟಕದಿಂದ ಆಯ್ಕೆಯಾದ ಎ.ಇ. ಮತ್ತು ಜೆ.ಇ. ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲು ಆಯ್ಕೆಯಾದ ಅಭ್ಯರ್ಥಿಗಳ ಮುಖಂಡರು ಇಂದು ದಸ್ತಿಯವರಿಗೆ ಮನವರಿಕೆ ಮಾಡಿರುವಂತೆ ಬರುವ ಡಿಸೆಂಬರ 28 ರಂದು ಹಿಂದಿ ಪ್ರಚಾರ ಸಭಾ ಸೇಡಂ ರಸ್ತೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದಿಂದ ಆಯ್ಕೆಯಾದ ಎ.ಇ./ಜೆ.ಇ. ಅಭ್ಯರ್ಥಿಗಳ ಸಭೆ ನಡೆಸಲು ನಿರ್ಧರಿಸಲಾಯಿತು.
371ನೇ(ಜೆ) ಮೀಸಲಾತಿಗೆ ಸಂಬಂಧಿಸಿ, ದಿನಾಂಕ : 1.2.23ರ ಡಿ.ಪಿ.ಎ.ಆರ್. ಸುತ್ತೋಲೆಯ ಲೋಪದಿಂದ ಕೆ.ಎ.ಟಿಯಲ್ಲಿ ರದ್ಧಾಗಿರುವ ಸುತ್ತೋಲೆಯ ಕಾರಣ ಕಲ್ಯಾಣ ಕರ್ನಾಟಕದ ನೂರಾರು ಅಭ್ಯರ್ಥಿಗಳು ಕಳೆದ ಮೂರು ವಾರಗಳಿಂದ ಸಚಿವರು, ಶಾಸಕರುಗಳ ಮನೆ ಮುಂದೆ ಅಲೆದಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ, ಈಶ್ವರ ಖಂಡ್ರೆಯವರಿಗೆ, ಶರಣಪ್ರಕಾಶ ಪಾಟೀಲ, ಅಜಯಸಿಂಗ್ ಸೇರಿದಂತೆ ಅನೇಕ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ನಿರಂತರ ಸಂಪರ್ಕಿಸಿ ಅಳಿಲು ತೋಡಿಕೊಂಡರುವಂತೆ, ಸಚಿವರು ಅಧಿಕಾರಿಗಳಿಗೆ ಸುತ್ತೋಲೆಯಿಂದಾ ಗಿರುವ ಅನ್ಯಾಯ ಸರಿಪಡಿಸುವ ಬಗ್ಗೆ ಆದೇಶ ನೀಡಿದರೂ ಸಹ ಇನ್ನೂ ಈ ಬಗ್ಗೆ ನ್ಯಾಯ ದೊರಕಿಲ್ಲ. ತಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಲು ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕಚೇರಿಗೆ ಭೇಟಿ ನೀಡಿ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರಿಗೆ ತಮಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿರುವಂತೆ ಇದಕ್ಕೆ ಸಂಬಂಧಿಸಿ ಹೋರಾಟ ಸಮಿತಿ, ಆಯ್ಕೆಯಾದ ಎ.ಇ/ಜೆ.ಇ. ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲು ಬರುವ 28 ರಂದು ಮಧ್ಯಾಹ್ನ 12 ಗಂಟೆಗೆ ಹಿಂದಿ ಪ್ರಚಾರ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯ ನಗರ ಜಿಲ್ಲೆಗಳ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಈ ಮಹತ್ವದ ಸಭೆಗೆ ಹಾಜರಾಗಲು, ಫಲಾನುಭವಿಗಳ ಮುಖಂಡರಾದ ವಿನೋದ, ಹಿಪ್ಪರಗಿ ಮಹಿಬೂಬ, ಸುನೀಲ, ಮಹಿಬೂಬ ಜಮಾದಾರ, ಕು.ಅಶ್ವಿನಿ, ಹೋರಾಟಗಾರ ಲಕ್ಷ್ಮಣ ದಸ್ತಿಯವರ ಸಮ್ಮತಿಯಂತೆ ಪತ್ರಿಕಾ ಪ್ರಕಟಣೆ ಮೂಲಕ ಕೋರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 8431786078 / 7975147713 ಸಂಖ್ಯೆಗೆ ಫಲನುಭವಿ ಎ.ಇ./ ಜೆ.ಇ. ಅಭ್ಯರ್ಥಿಗಳು ಸಂಪರ್ಕಿಸಲು ಪ್ರಕಟಣೆಯ ಮೂಲಕ ಮನವಿ ಮಾಡಿ ಕೊಂಡಿದ್ದಾರೆ.