ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ

0
25

ಕಲಬುರಗಿ: ಕೆಮ್ಮು, ನೆಗಡಿ, ಜ್ವರ, ಕರೋನಾದಂತಹ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಬೇಕು. ಕಾಯಿಲೆ ಪೀಡಿತರಿಂದ ದೂರವಿರುವುದು, ಅವರು ಉಪಯೋಗಿಸಿದ ವಸ್ತುಗಳನ್ನು ಬಳಸದಿರುವುದು, ಸುರಕ್ಷಿತ ಆಹಾರ ಸೇವನೆ, ನಿಯಮಿತವಾಗಿ ಕೈ ತೊಳೆಯುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಕರವಸ್ತ್ರ ಹಿಡಿಯುವುದು, ಮಾಸ್ಕ್ ಧರಿಸುವುದು ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ “ಅಂತಾರಾಷ್ಟ್ರೀಯ ಸಾಂಕ್ರಾಮಿಕ ಕಾಯಿಲೆಗಳ ಮುಂಜಾಗ್ರತಾ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕರೋನಾ ಕಾಯಿಲೆಯು ಇಡೀ ಜಗತ್ತನ್ನು ತೊಂದರೆಗೀಡು ಮಾಡಿದ ಪ್ರಸ್ತುತ ಅಸ್ಥಿತ್ವದಲ್ಲಿರುವ ಕಾಯಿಲೆಯಾಗಿದೆ. ಇದು ಈಗ ರೂಪಾಂತರವಾಗಿ ಜೆಎನ್-1 ಎಂದು ಹೆಸರು ಪಡೆದಿದ್ದು, ಇದು ರಾಜ್ಯ, ಜಿಲ್ಲೆಯಲ್ಲಿ ಕಾಯಿಲೆಯ ಲಕ್ಷಣಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕು. ಮಾಸ್ಕ್ ಧರಿಸುವುದು ಉತ್ತಮ. ಅದರಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ಸ್ವಚ್ಚತೆಗೆ ಆದ್ಯತೆ ನೀಡಿ, ಹೊರಗಿನ ತಿಂಡಿ-ತಿನಸುಗಳು ಬೇಡ. ಅನಾವಶ್ಯಕವಾಗಿ ಸಂಚಾರಿಸುವುದು, ಜನಸಂದಣಿಯಿರುವ ಪ್ರದೇಶಗಳಿಂದ ದೂರವಿರುವುದು ಒಳ್ಳೆಯದಾಗಿದೆ. ತಾಜಾ ತರಕಾರಿ, ಹಣ್ಣುಗಳನ್ನು ಸೇವಿಸಿ ಎಂದು ಅನೇಕ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಜಗನಾಥ ಗುತ್ತೇದಾರ, ಮಂಗಲಾ ಚಂದಾಪುರೆ, ನಾಗೇಶ್ವರಿ ಮುಗಳಿವಾಡಿ, ಅರ್ಚನಾ ಸಿಂಗೆ, ಗಂಗಾಜ್ಯೋತಿ ಗಂಜಿ, ಕಿರಣ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here