ಪ್ರಾಕೃತಿಕ ವಿಕೋಪ ಎನ್ನುವುದು ಸಾರ್ವಜನಿಕ ಜೀವನಕ್ಕೆ ಗಂಭೀರ ಹಾಗೂ ಅನಿರೀಕ್ಷಿತ ಬೆದರಿಕೆ: ಡಾ. ಶಿವಾನಂದ

0
30

ಕಲಬುರಗಿ: ಪ್ರಕೃತಿಯ ವಿಪತ್ತುಗಳನ್ನು ತಡೆಯುವುದು ಮಾನವನಿಗೆ ಕಷ್ಟಸಾಧ್ಯವಾದರೂ ಭವಿಷ್ಯದ ಸನ್ನದ್ಧತೆ ಹಾಗೂ ಉತ್ತಮ ತಾಂತ್ರಿಕ ಕೌಶಲ್ಯಗಳನ್ನು ಬಳಸಿ ನಿರ್ಮಿಸಿದ ಕಟ್ಟಡ- ಕಾಮಗಾರಿಗಳ  ಮೂಲಕ  ಜೀವನ, ಆಸ್ತಿ, ಮಾನವ ಸಂಕಷ್ಟದ ನಷ್ಟಗಳನ್ನು, ಸಾವು, ನೋವುಗಳನ್ನು ತಪ್ಪಿಸುವಲ್ಲಿ ಸಿವಿಲ್ ಎಂಜಿನಿಯರ್ ಗಳ ಪಾತ್ರ ಮಹತ್ತರವಾದುದು ಎಂದು ಹೈದ್ರಾಬಾದ್ ಕರ್ನಾಟಕ  ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಶಿವಾನಂದ ದೇವರ ಮನಿ ಅವರು ಅಭಿಪ್ರಾಯಪಟ್ಟರು.

ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗ ಏರ್ಪಡಿಸಿದ್ದ ಟೆಕ್ಯೂಪ್-೩ ಪ್ರಾಯೋಜಿತ ೫ ದಿನಗಳ ” ಡಿಜಾಸ್ಟರ್ ಸೇಫ್     ಕನ್ಸ್ಟ್ರಕ್ಷನ್ ಪ್ಯ್ರಾಕ್ಟಿಸಸ್” ಕಾರ್ಯಾಗಾರಕ್ಕೆ ಅವರು ಚಾಲನೆ ನೀಡಿದರು. ಕಾರ್ಯಾಗಾರದ ಔಚಿತ್ಯತೆಯ ಕುರಿತು   ತಮ್ಮ ಉತ್ತಮ ಅಭಿಪ್ರಾಯವನ್ನು ಟೆಕ್ಯೂಪ್ ಪರ್ಫಾರ್ಮೆನ್ಸ್ ಆಡಿಟರ್ ಡಾ. ಬಿ.ಎನ್. ಚೌಧರಿ ಅವರು ವ್ಯಕ್ತಪಡಿಸಿದರು.

Contact Your\'s Advertisement; 9902492681

ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇತ್ತೀಚಿನ ಕೊಡಗು ದುರ್ಘಟನೆ ನಮಗೆ ದೊಡ್ಡ ಪಾಠವಾಗಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ನೈಸರ್ಗಿಕ ವಿಕೋಪ ಗಳನ್ನು  ಎದುರಿಸಲು ಸಾಧ್ಯವಿರುವಂತಹ ಕಟ್ಟಡಕಾಮಗಾರಿಗಳ ನಿರ್ಮಾಣ ಕೌಶಲ್ಯಗಳನ್ನು ಇವತ್ತು ಎಲ್ಲಾ ಸಿವಿಲ್ ಇಂಜಿನಿಯರ್ ಗಳು ಅರಿತು ಕೊಳ್ಳಬೇಕು, ಈ ನಿಟ್ಟಿನಲ್ಲಿ ೫ ದಿನಗಳ ಈ ಕಾರ್ಯಾಗಾರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಅನುಭಾವದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬೃಂದಾವನ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಬಿ.ಆರ್.ನಿರಂಜನ ಅವರು ಅಭಿಪ್ರಾಯಪಟ್ಟರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಾದ ಡಾ.ಸುರೇಶ ಪಾಟೀಲ್ ಅವರು ಮಾತನಾಡಿ  ಭಾಗವಹಿಸಿದ  ಎಲ್ಲರೂ   ಕಾರ್ಯಾಗಾರದ ಲಾಭವನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.ಟೆಕ್ಯೂಪ್-೩ ಸಂಯೋಜಕ ಪ್ರೊಫೆಸರ್ ಶರಣ ಪಡಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ರಾದ ಡಾ.ಎಸ್.ಎಸ್.ಹೆಬ್ಬಾಳ, ಡೀನ್ ಅಕೆಡಿಮಿಕ್ ಡಾ.ಎಸ್.ಆರ್.ಪಾಟೀಲ ಅವರು ವೇದಿಕೆಯಲ್ಲಿದ್ದರು. ಕುಮಾರಿ ಅರ್ಚನಾ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಯೋಜಕ ಪ್ರೊಫೆಸರ್ ಬಿ. ಜಿ.ಮಹೇಂದ್ರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರೊಫೆಸರ್ ಸರಸ್ವತಿ ರೆಡ್ಡಿ ನಿರೂಪಿಸಿದರು.ಕಾರ್ಯಾಗಾರದ ಸಂಯೋಜಕ ಪ್ರೊಫೆಸರ್ ಶಿವರಾಜ್ ಇಂಗನ್ ಕಲ್ಲ ವಂದಿಸಿದರು. ವಿಭಾಗದ ಪ್ರಾಧ್ಯಾಪಕರು,ಉಪ-ಪ್ರಾಧ್ಯಾಪಕರು, ವಿವಿಧ ವಿಭಾಗಗಳ ಮುಖ್ಯಸ್ಥರು,  ಡೀನ್ ಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here