ಗೋದುತಾಯಿ ಕಾಲೇಜಿನಲ್ಲಿ ಐದು ದಿನಗಳ ಸಾಂಸ್ಕೃತಿಕ ಸಮ್ಮೇಳನ

0
49

ಕಲಬುರಗಿ : ಪರಮಪೂಜ್ಯ ಲಿಂ. ದೊಡ್ಡಪ್ಪ ಅಪ್ಪ ಅವರ ೩೬ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರದಿಂದ ಐದು ದಿನಗಳ ಕಾಲ ಸಾಂಸ್ಕೃತಿಕ ಸಮ್ಮೇಳನ ಆರಂಭವಾಗಿದೆ.

ಈ ಕಾರ್ಯಕ್ರಮವನ್ನು ಬಾಗಲಕೋಟದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಸಂಗೀತ ಪ್ರಾಧ್ಯಾಪಕರಾದ ಪಂ. ಸಿದ್ಧರಾಮಯ್ಯ ವಿ. ಮಠಪತಿ(ಗೋರ್ಟಾ) ಉದ್ಘಾಟಿಸಿ ಮಾತನಾಡಿದರು. ಸಂಗೀತ ಕೇವಲ ಮಾನವ ಜೀವಕುಲಕಷ್ಟೇ ಸೀಮಿತವಾಗದೆ ವಿಶ್ವದ ಜೀವರಾಶಿಗಳೆಲ್ಲ ತುಂಬಿದೆ. ಪಶುಪಕ್ಷಿಗಳು ಕೂಡಾ ಸಂಗೀತಕ್ಕೆ ಮನಸೋಲುತ್ತವೆ. ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಸಂಗೀತ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಸಂಗೀತದಿಂದ ಅನೇಕ ಮಾನಸಿಕ ಹಾಗೂ ದೈಹಿಕ ರೋಗಗಳನ್ನು ಹೋಗಲಾಡಿಸಲಾಗುತ್ತಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಈ ಮಹಾವಿದ್ಯಾಲಯದಲ್ಲಿ ಸಂಗೀತ ಕಲಿಯುತ್ತಿರುವುದು ಸಂತೋಷದ ಸಂಗತಿ ಏಕೆಂದರೆ ಬೇರೆ ಮಹಾವಿದ್ಯಾಲಯಗಳಲ್ಲಿ ಸಂಗೀತ ಕಲಿಯುವವರ ಸಂಖ್ಯೆ ತೀರ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರು ಸಂಗೀತಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ಅದರಂತೆ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀಯವರು ಸಂಗೀತ ಕಲಿಯಲು ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದಾರೆ. ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರ ಪುಣ್ಯಸ್ಮರಣೋತ್ಸವದ ಅಂಗವಾಗಿ ಪ್ರತಿವರ್ಷ ಬೇರೆ ಬೇರೆ ಕಾರ್ಯಕ್ರಮಗಳು ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಅದರಂತೆ ಈ ವರ್ಷ ಸಾಂಸ್ಕೃತಿಕ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಖ್ಯಾತ ಸಂಗೀತ ಕಲಾವಿದರಾದ ಪಂ. ನಾಗಲಿಂಗಯ್ಯ ಎಂ. ವಸ್ತ್ರದಮಠ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರೊ. ಶಾಂತಲಾ ನಿಷ್ಠಿ, ಡಾ. ಇಂದಿರಾ ಶೇಟಕಾರ, ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ.ಸಿದ್ದಮ್ಮ ಗುಡೇದ್, ಡಾ. ಪುಟ್ಟಮಣಿ ದೇವಿದಾಸ, ಪ್ರೊ.ಎಂ.ಎಸ್.ಪಾಟೀಲ, ಪ್ರೊ. ಕೃಪಾಸಾಗರ ಗೊಬ್ಬುರ, ಡಾ. ಸಂಗೀತಾ, ಪ್ರೊ. ಅನಿತಾ ಗೊಬ್ಬುರ, ಪ್ರೊ. ಕವಿತಾ ಮಠಪತಿ, ಪ್ರೊ. ಷಣ್ಮುಖ ಪಾಟೀಲ, ಬಸವರಾಜ ಸಾಲಿ, ವಿಶ್ವನಾಥ ವಸ್ತ್ರದಮಠ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾದ ಪ್ರೊ.ರೇವಯ್ಯ ವಸ್ತ್ರದಮಠ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಡಾ.ಸೀಮಾ ಪಾಟೀಲ ನಿರೂಪಿಸಿದರು. ಕು.ಶ್ವೇತಾ ಪ್ರಾರ್ಥಿಸಿದರು.
ನಂತರ ಪಂ. ಸಿದ್ಧರಾಮಯ್ಯ ವಿ.ಮಠಪತಿ ಮತ್ತು ಪಂ.ನಾಗಲಿಂಗಯ್ಯ ಎಂ.ವಸ್ತ್ರದಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here