ಸುರಪುರ: ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಚರಿಸಿದರು.ಈ ಸಂದರ್ಭದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ರಾಹುಲ್ ಹುಲಿಮನಿ ಮಾತನಾಡಿ,ಭೀಮಾ ಕೋರೆಗಾಂವ್ ವಿಜಯೋತ್ಸವ ಎನ್ನುವವುದು ಭಾರತದ ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿರುವ ಘಟನೆಯಾಗಿದೆ. 1818ರಲ್ಲಿ ಮರಾಠ ಪೇಶ್ವೆಗಳು ಅಲ್ಲಿಯ ಮಹರ್ ಸಮುದಾಯದವರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದ ಮಹರ್ ಜನಾಂಗದ ನಮ್ಮ ಮೂಲನಿವಾಸಿಗಳು ಪೇಶ್ವೆಗಳ ವಿರುದ್ಧ ಕೇವಲ 200 ಜನರು ಸಾವಿರಾರು ಜನರನ್ನು ಸೆದೆಬಡಿದು ವಿಜಯ ಸಾಧಿಸಿದ ದಿನವನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ವಿಜಯೋತ್ಸವವೆಂದು ಆಚರಣೆ ಆರಂಭಿಸಿದರು,ಈ ದಿನವನ್ನು ದೇಶದಲ್ಲಿನ ಇತರರು ಹೊಸ ವರ್ಷವೆಂದು ಆಚರಿಸುತ್ತಿದ್ದರೆ,ಮೂಲನಿವಾಸಿಗಳಾದ ನಾವುಗಳು ಈ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಳಪ್ಪ ಕಿರದಳ್ಳಿ,ಶರಣಪ್ಪ ತಳವಾರಗೇರ,ಚಂದಪ್ಪ ಪಂಚಮ್,ಮಂಜುನಾಥ ಹೊಸ್ಮನಿ,ನಾಗರಾಜ ಬೇವಿನಗಿಡ,ಬಸವರಾಜ ಪೂಜಾರಿ,ಹನುಮಂತ ಕೊಡಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.