ಅಂಗನವಾಡಿ ಕೇಂದ್ರ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸಲಿ; ಲಕ್ಷ್ಮೀಪುರ: ಬಾಲ ಮೇಳ ಕಾರ್ಯಕ್ರಮ

0
15

ಸುರಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಹಸನಾಪುರ ಸರ್ಕಲ್ ನ ಲಕ್ಷ್ಮಿಪುರದ 4 ಅಂಗನವಾಡಿ ಕೇಂದ್ರಗಳ ಸಹಕಾರದೊಂದಿಗೆ ಮಕ್ಕಳ ಬಾಲ ಮೇಳವನ್ನು ಹಮ್ಮಿಕೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಅನ್ವರ್ ಜಮಾದಾರ್ ಮಾತನಾಡುತ್ತಾ, ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ ಎಂಬಂತೆ ಮಕ್ಕಳಲ್ಲಿ ಆರಂಭದ ಹಂತದ ಶಿಕ್ಷಣ ಅತ್ಯಂತ ಪ್ರಮುಖವಾಗಿರುತ್ತದೆ ಈ ಹಂತದಲ್ಲಿ ಮಕ್ಕಳಲ್ಲಿ ಭಾಷೆ ಬೆಳವಣಿಗೆಯು ಅತಿ ವೇಗದಲ್ಲಿ ಆಗುವುದರಿಂದ ಮಕ್ಕಳಲ್ಲಿ ಅಂಗನವಾಡಿ ಕೇಂದ್ರಗಳು ಪೂರಕ ಶಿಕ್ಷಣ ಕೊಡುವುದರ ಮೂಲಕ ಅವರಲ್ಲಿ ಶೈಕ್ಷಣಿಕ ಆಸಕ್ತಿ ಬೆಳೆಸುವಂತಾಗಲಿ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಅಂಗನವಾಡಿ ಮಹಿಳಾ ಮೇಲ್ವಿಚಾರಕಿಯಾದ ಜಯಶ್ರೀ ಬಿರಾದಾರ್ ಮಾತನಾಡುತ್ತಾ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕರಿಗೆ ಪೂರ್ವ ಪ್ರಾಥಮಿಕ ಕ್ಷಣಕ್ಕೆ ಅನೇಕ ತರಬೇತಿಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕೇಂದ್ರಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿರುವುದು ಸಲಹೆ ನೀಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಭೀಮಣ್ಣ ಮಾಜಿ ಸೈನಿಕರು ಮಕ್ಕಳು ಕಥೆ ಹಾಡು ಇನ್ನಿತರ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ದೀಪಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು, ಹನುಮಂತ ಮಟ್ಲ ಸದಸ್ಯರು, ಭೀಮರಾಯ ಕಡಿಮನಿ, ತಿಪ್ಪಣ್ಣ ಶುಕ್ಲ , ನೀಲಗಂಗಾ ಸಿಹೆಚ್ಓ, ದಶರಥ್, ಅಂಗನವಾಡಿ ಮೇಲ್ವಿಚಾರಕಿಯರಾದ ಪದ್ಮಾವತಿ ನಾಯಕ್, ಶಶಿಕಲಾ, ಸಾವಿತ್ರಿ, ಮಹಾದೇವಿ, ಭಾಗಮ್ಮ, ಸುನಿತಾ, ಜಯಶ್ರೀ ,ಶಾಂತ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ ಬಿಜಾಸಪುರ್, ರಾಜಶೇಖರ್, ಅಂಗನವಾಡಿ ಕಾರ್ಯಕರ್ತರಾದ ಈಶ್ವರಮ್ಮ, ನಾಗರತ್ನ , ಸಾಬಮ್ಮ, ಮಂಜುಶ್ರೀ, ಹಸನಾಪುರ ಹಾಗೂ ಸುರಪುರ ಸರ್ಕಲ್ ನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಲಕ್ಷ್ಮಿಪುರದ ಪಾಲಕ ಪೋಷಕರು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here