ತೊನಸನಹಳ್ಳಿ(ಎಸ್); ಮನೆಮನೆಗೆ ಮಂತ್ರಾಕ್ಷತೆ ವಿತರಣೆ

0
19

ಶಹಾಬಾದ: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆಯ ಶ್ರೀರಾಮ ಲಲ್ಲಾನ ವಿಗ್ರಹ ಪ್ರತಿμÉ್ಠಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಅಭಿಯಾನದಲ್ಲಿ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಮನೆಮನೆಗೆ ಮಂತ್ರಾಕ್ಷತೆ ವಿತರಿಸಲಾಯಿತು.

ಗ್ರಾಮದ ಯುವಮುಖಂಡರು ಮನೆಮನೆಗೆ ತೆರಳಿ ಜನವರಿ 22ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ಸುಮುಹೂರ್ತದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿμÉ್ಠ ನಡೆಯಲಿದೆ. ಇದನ್ನು ಪ್ರತೀ ರಾಮಭಕ್ತರು ತಮ್ಮತಮ್ಮ ಊರು, ಮನೆಗಳಲ್ಲಿ ಸಂಭ್ರಮದಿಂದ ಆಚರಿಸುವಂತಾಗಲು ಈ ಅಭಿಯಾನ ನಡೆಸಲಾಗುತ್ತಿದೆ.

Contact Your\'s Advertisement; 9902492681

ಶ್ರೀರಾಮಲಲ್ಲಾನ ವಿಗ್ರಹ ಪ್ರತಿμÉ್ಠಯ ದಿನ ಸೂರ್ಯಾಸ್ತದ ಬಳಿಕ ಎಲ್ಲ ಮನೆಗಳಲ್ಲಿ ಕನಿಷ್ಠ ಐದು ದೀಪ ಬೆಳಗಬೇಕು, ಮನೆಯವರೆಲ್ಲರೂ ಸೇರಿ ಅಯೋಧ್ಯೆ ಮಂದಿರ ಇರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾ ಮಂಗಳಾರತಿ ಬೆಳಗಬೇಕು ಎಂದು ತಿಳಿಸಿ ಮಂತ್ರಾಕ್ಷೇತಗಳ್ಳನ್ನು ವಿತರಣೆಮಾಡಲಾಗುತ್ತಿದೆ ಎಂದರು. ಅಲ್ಲದೇ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸುಭಾಷ ಜಾಪೂರ,ಬಸವರಾಜ ಮದ್ರಕಿಮ ಶ್ರೀಶೈಲಗೌಡ ರಾಮಶೆಟ್ಟಿ, ಪ್ರಕಾಶರೆಡ್ಡಿ,ಸಿದ್ದು ಸಜ್ಜನ್, ಅಣವೀರ.ಎಸ್.ಗೊಳೇದ್, ಮಲ್ಲಿಕಾರ್ಜುನ ಗೊಳೇದ್,ಭೀಮರಾವ ಹೂಗಾರ,ಮನ್ನು ನಾಟೇಕಾರ,ಸಿದ್ದಣ್ಣಗೌಡ.ಎಸ್.ಭಮ್ಮಶೆಟ್ಟಿ, ಚಂದ್ರಪ್ರಕಾಶ.ಆರ್.ಹಿರೇಮಠ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here