ದೇಶದ ಸಂಸ್ಕøತಿ -ಗೌರವ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕ ವಿವೇಕಾನಂದರು

0
12

ಶಹಾಬಾದ: ದೇಶದ ಸಂಸ್ಕøತಿ ಮತ್ತು ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕರಾದ ವಿವೇಕಾನಂದರ ದೇಶ ಪ್ರೇಮ ಮತ್ತು ಈ ಮಣ್ಣಿನ ಬಗ್ಗೆ ಅವರಿಗಿದ್ದ ಧನ್ಯತಾ ಭಾವನೆ ಇಂದಿನ ಯುವಕರಲ್ಲಿ ಬೆಳೆಯಬೇಕಿದೆ ಎಂದು ಬಿಜೆಪಿ ಹಿರಿಯ ಮುಖಂಡ ಚಂದ್ರಕಾಂತ ಗೊಬ್ಬೂರಕರ ಹೇಳಿದರು.

ಅವರು ಶುಕ್ರವಾರÀ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಶ್ರೀ ಸ್ವಾಮಿ ವಿವೇಕಾನಂದರವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಯುವ ಜನಾಂಗಕ್ಕೆ ದೇಶದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಇದ್ದು, ಆ ಶಕ್ತಿಯ ಮಹತ್ವವನ್ನು ಯುವ ಜನಾಂಗ ಅರಿಯಬೇಕಾಗಿದೆ.ನಮ್ಮೊಳಗೆ ಅಗಾಧವಾದ ಅತಿ ಅದ್ಭುತ ಶಕ್ತಿ ಇದೆ.ಅದನ್ನು ಅರಿತು ನಡೆದಾಗ ಮಾತ್ರ ನಮ್ಮ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ.ಹಾಗೇ ನಾವು ಅಂದುಕೊಂಡ ಕಾರ್ಯವು ಎಲ್ಲ ಫಲಿಸುತ್ತದೆ ಎಂದು ಹೇಳಿದರು.

ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕಿಚ್ಚು ಮೂಡಿದಾಗ ಮಾತ್ರ ಭಾರತ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ. ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು.ಅಡೆತಡೆಗಳು ಬರುವುದು ಸಹಜ.ಅದನ್ನು ಮೆಟ್ಟಿ ನಿಂತಾಗ ಮಾತ್ರ ನಮ್ಮ ಗೆಲುವು ಮಾತ್ರ ಖಚಿತ.ಆದ್ದರಿಂದ ಆತ್ಮಬಲ,ಆತ್ಮ ವಿಶ್ವಾಸದ ಶಕ್ತಿ ಸ್ವಾರ್ಥಕ್ಕೆ ಬಲಿಯಾಗದೇ ಸಮಾಜ ಮುಖಿ ಚಿಂತನೆಗಳತ್ತ ವಾಲಿದರೆ ವಿವೇಕಾನಂದರ ಆಶಯಗಳು ಈಡೇರಲು ಸಾಧ್ಯ ಎಂದರು.

ಮುಖಂಡರಾದ ಮಹಾದೇವ ಗೊಬ್ಬೂರಕರ, ದುರ್ಗಪ್ಪ ಪವಾರ, ಅರುಣ ಪಟ್ಡಣಕರ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ಭೀಮರಾವ ಪಾಟೀಲ,ಯಲ್ಲಪ್ಪ ದಂಡಗುಲಕರ, ದತ್ತಾತ್ರೇಯ ಗಂಟಿ, ದೊಡ್ಡಪ್ಪ ಹೊಸಮನಿ, ಶ್ರೀನೀವಾಸ ನೆದಲಗಿ, ಶ್ರೀನಿವಾಸ ದೇವಕರ, ಅಮೀತಸಿಂಗ ಠಾಕೂರ್, ಉಮೇಶ ನಿಂಬಾಳಕರ, ಪ್ರಶಾಂತ ಕುಂಬಾರ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಸದಾನಂದ ಕುಂಬಾರ ಸ್ವಾಗತಿಸಿ, ನಿರೂಪಿಸಿದರು. ದಿನೇಶ ಗೌಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here