7ನೇ ವೇತನ ಆಯೋಗ, ಹಳೆ ಪಿಂಚಣಿ ಯೋಜನೆ ಜಾರಿಗೆ ಮನವಿ

0
73

ಶಹಾಬಾದ:ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಶುಕ್ರವಾರ ಶಹಾಬಾದ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದವರು ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಜುಲೈ 2022ರಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬೇಕಿತ್ತು. ಶೇ.40ಮೂಲ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮಾತ್ರ ಹೆಚ್ಚಿಸಿದ್ದು, ಉಳಿದ ಶೇ.23ರಷ್ಟು ಹೆಚ್ಚಿಸಬೇಕಾಗಿದೆ. ಕೂಡಲೇ 7ನೇ ವೇತನ ಆಯೋಗ ವರದಿ ಪಡೆದು ಅನುμÁ್ಠನಗೊಳಿಸಲು ಕೈಜೋಡಿಸಬೇಕು.

Contact Your\'s Advertisement; 9902492681

2006 ಏ.1ರನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದವರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬುದುನಮ್ಮ ಬೇಡಿಕೆಯಿದೆ.ಅಲ್ಲದೇ ಎಲ್ಲಾ ಸರಕಾರಿ ನೌಕರರಿಗೂ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುμÁ್ಠನ ಕುರಿತು ತಾವು ನಮ್ಮೊಂದಿಗೆ ಕೈಜೋಡಿಸಿ ಸರಕಾರಕ್ಕೆ ಒತ್ತಾಯಿಸಿಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಶಶಿಕಾಂತ್ ಭರಣಿ, ಏಮಿನಾಥ್ ರಾಥೋಡ್, ಜಗಪ್ಪ ಹೊಸಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ವಿಷ್ಣು ತೀರ್ಥ ಆಲೂರು, ಜಿಲ್ಲಾ ಕಾರ್ಯದರ್ಶಿ ಸಿದ್ದು ಮಠಪತಿ, ಜೇವರ್ಗಿ ಅಧ್ಯಕ್ಷ ಗುಡುಲಾಲ್ ಶೇಕ್, ಡಿ.ಬಿ.ಪಾಟೀಲ್, ಎನ್.ಪಿ.ಎಸ್ ಅಧ್ಯಕ್ಷ ನಾಗೇಶ್, ಅನಿಲಕುಮಾರ್,ಎನ್.ಡಿ. ಜಕಾತಿ, ಬನ್ನಪ್ಪ ಸೈದಾಪುರ್, ಶಾಂತಮಲ್ಲ ಶಿವಭೋ, ಟಿಕಾರಾವ್, ಮಹೇಂದ್ರಕರ್, ಕಲಾವತಿ, ಸುಮಂಗಲ. ಅರುಣ, ಲಿಂಗಮ್ಮ, ಸುಜಾತಾ, ಲಲಿತಾ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here