ಪ್ರತಿಯೊಂದು ಮನೆಯಲ್ಲಿ ಒಬ್ಬ ಯೋಧ ಸಿದ್ಧನಾಗಲಿ

0
19

ಕಲಬುರಗಿ: ಯಾವುದೇ ಒಂದು ರಾಷ್ಟ್ರದ ರಕ್ಷಣೆ, ಅಭಿವೃದ್ಧಿಯಲ್ಲಿ ಅಲ್ಲಿನ ಸೈನಿಕರ ಪಾತ್ರ ಪ್ರಮುಖವಾಗಿದೆ. ಮಳೆ-ಚಳಿ, ಹಗಲು-ರಾತ್ರಿಯೆನ್ನದೇ, ಮನೆ-ಸಂಸಾರವನ್ನು ಬಿಟ್ಟು ದೇಶದ ಗಡಿಯನ್ನು ಕಾಯುವ ಪವಿತ್ರವಾದ ಕೆಲಸ ಯೋಧರು ಮಾಡುತ್ತಾರೆ. ದೇಶ ಕಾಯುವ, ಗೌರವಿಸುವ, ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆಯ ಕಾರ್ಯ ಸೈನಿಕರಿಗೆ ಮಾತ್ರ ಮೀಸಲು ಬೇಡ. ಜೊತೆಗೆ ಪ್ರತಿಯೊಂದು ಮನೆಯಿಂದ ಒಬ್ಬರಾದರು ತಮ್ಮ ಆಸ್ತಿ-ಪಾಸ್ತಿಗಳ ರಕ್ಷಣೆಯೊಂದಿಗೆ ಸಾರ್ವಜನಿಕ ಆಸ್ತಿಗಳು, ದೇಶದ ರಕ್ಷಣೆಗೆ ಸಿದ್ದವಾಗಬೇಕಾಗಿದೆ ಎಂದು ಭಾರತೀಯ ಸೇನಾ ಮಾಜಿ ಲೆಪ್ಟಿನೆಂಟ್ ಶಿವಶರಣಪ್ಪ ದುಧನಿ ಹೇಳಿದರು.

ನಗರದ ಸೇಡಂ ರಸ್ತೆಯ ಸ್ವಸ್ತಿಕ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘76ನೇ ರಾಷ್ಟ್ರೀಯ ಸೇನಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ನಾನು 1965ರಲ್ಲಿ ಜರುಗಿದ ಭಾರತ-ಪಾಕ್ ಯುದ್ಧ ಮತ್ತು 1971ರಲ್ಲಿ ಜರುಗಿದ ಭಾರತ-ಬಾಂಗ್ಲಾದೇಶ ಯುದ್ಧದಲ್ಲಿ ಭಾಗವಹಿಸಿದ್ದೇನೆ. ಭಾರತೀಯ ಸೈನಿಕರು ಅಶಾಂತಿ, ಹಿಂಸೆಯನ್ನು ಎಂದಿಗೂ ಕೂಡಾ ಸಹಿಸುವುದಿಲ್ಲ. ಆದರೆ ಅವರು ಶಾಂತಿಪ್ರಿಯರಾಗಿದ್ದಾರೆ. ಸೈನಿಕರು ದೇಶದ ನೈಜ ನಾಯಕರು.

ಅವರಿಗೆ ದೇಶದ ಹಿತವೇ ಪ್ರಮುಖವಾಗಿದೆ. ಅವರಿಗೆ ದೊರೆಯಬೇಕಾ ಎಲ್ಲಾ ಸೌಲಭ್ಯಗಳನ್ನು ನೀಡಿ ಗೌರವಿಸಬೇಕು. ಸಮಾಜ, ನಾಗರಿಕರು ಸೈನಿಕರಿಗೆ ಸ್ಪೂರ್ತಿ, ಪ್ರೋತ್ಸಾಹ ನೀಡಬೇಕು. ಅವರ ಕಷ್ಟಗಳಲ್ಲಿ ಭಾಗವಹಿಸಬೇಕು. ಸೈನಿಕರಿಗೆ ನೇತಾಜಿ ಸುಭಾಷ್‍ಚಂದ್ರ ಭೋಷ್ ಅವರೇ ಸ್ಪೂರ್ತಿಯಾಗಿದ್ದು, ಅವರನ್ನು ಎಂದಿಗೂ ಕೂಡಾ ಮರೆಯುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಕಾರ್ಪೊರೇಟರ್ ಶಾಂತಾಬಾಯಿ ಸಿ.ಹಾಲಮಠ, ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ. ಪಾಟೀಲ, ಸದಸ್ಯರಾದ ಪ್ರಕಾಶ ಸರಸಂಬಿ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಬಡಾವಣೆಯ ಪ್ರಮುಖರಾದ ಚಂದ್ರಶೇಖರಯ್ಯ ಹಾಲಮಠ, ಬಿ.ಕೆ.ಸ್ವಾಮಿ, ಎಸ್.ಎಸ್.ಕಿರಣಗಿ, ಅಮೃತ ಬಿರಾದಾರ, ಜರಿತಾ ಎಸ್.ದುಧನಿ, ವೀರೇಶ, ಸ್ನೇಹಲಾ, ವಿಜಯಲಕ್ಷ್ಮೀ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here