ಕಲಬುರಗಿ: ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಈಶ್ವರ ಖಂಡ್ರೆ ಸಾಬ ಅಭಿಮಾನಿಗಳ ಸಂಘದ ವತಿಯಿಂದ ಸಚಿವರಾದ ಈಶ್ವರ ಖಂಡ್ರೆ ಅವರ ಜನ್ಮದಿನದ ಅಂಗವಾಗಿ ನಿರಾಶ್ರಿತರಿಗೆ ಅನ್ನದಾಸೋಹ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಮೇಯರ್ ಶರಣಕುಮಾರ ಮೋದಿ, ನೀಲಕಂಠರಾವ ಮೂಲಗೆ, ಸಿದ್ರಾಮ ಪ್ಯಾಟಿ, ಲಿಂಗರಾಜ ಕಣ್ಣಿ, ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ದಶವಂತ ಕಣಮಸಕರ್, ನಾಗರಾಜ ಘಂಟಿ, ಬಾಬುರಾವ ಬಿಳಗೆ, ಭೀಮಾಶಂಕರ ಮಂಡೆಕರ್, ರಮೇಶ ರಾಗಿ, ಮಹಾದೇವ ಮೋಘ, ಅರುಣ ಭರಣಿ, ಚಂದಪ್ಪ ಗಾಯಕವಾಡ, ನಾಗರಾಜ ಇಕ್ಕಳಕಿ, ಗೌತಮ್ ಸೂರನ್, ಮಂಜು ಕಡಗಂಚಿ, ಅವಿನಾಶ ನೈಕೋಡಿ, ನೀಲಕಂಠರಾವ ಭೀಮಳ್ಳಿ ಇದ್ದರು.