ಕಂಪ್ಯೂಟರ್ ವಿಜ್ಞಾನ ಮುಂದಿನ ಪೀಳಿಗೆಗೆ ದಾರಿ ದೀಪ

0
35

ಬೆಂಗಳೂರು: 21ನೇ ಶತಮಾನದಲ್ಲಿ ಕಂಪ್ಯೂಟರ್ ವಿಜ್ಞಾನ ಎಸ್ಟು ಪ್ರಮಾಣದಲ್ಲಿ ಬೇಳೆಯುತಿದೆಯೋ ಅದು ಇನ್ನೂ ಮುಂದೆ ಸಾಗಬೇಕು, ಮುಂದಿನ ಪೀಳಿಗೆಗೆ ದಾರಿ ದೀಪ ಆಗಬೇಕು ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ನುಡಿದರು.

ನಗರದ ಪ್ರತಿಷ್ಠಿತ ನ್ಯೂ ಹೊರೈಸನ್ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಶಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು 21ನೇ ಶತಮಾನದಲ್ಲಿ ಬೆಳೆದ ವೆಗಕ್ಕಿಂತಲು ಹೆಚ್ಚಿನ ವೇಗದಿಂದ ಬೆಳೆಯಬೇಕು ಎಂದು ನುಡಿದರು. ಕಂಪ್ಯೂಟರ್ ಸೈನ್ಸ್ ನಲ್ಲಿ ಹಲವು ಉಪ ಶಾಖೆಗಳು ಬೆಳೆದು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆಯಾಗಬೇಕು ಎಂದು ಹೇಳಿದ್ದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನೂ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಸವರಾಜ ಬಿರಾದಾರ ಅವರು ಮಾತನಾಡಿ ಕಂಪ್ಯೂಟರ್ ಇಂದಿನ ಯುಗದಲ್ಲಿ ಎಸ್ಟು ಮಹತ್ವ ಪಡೆದು ಕೊಂಡಿದೆ ಎಂದು ನುಡಿದರು.

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here