ರಾಯಚೂರು: ಮೋದಿ ಅಮಿತ್ ಷಾ ಜಾರಿಗೆ ತಂದ ಭಾರತ ನ್ಯಾಯ ಸಹಿಂತೆಯ ವಿರುದ್ಧ ಕಳೆದ 25 ದಿನಗಳಿಂದ ನಡೆದಿರುವ ಲಾರಿ ಚಾಲಕರ ಅಖಿಲ ಭಾರತ ಮುಷ್ಕರ ಮುಂದುವರೆದಿದೆ. ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಈ ಮುಷ್ಕರ ಬೆಂಬಲಿಸಿ ಮಾತನಾಡಿದ,ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಸಮನ್ವಯಕಾರ ಆರ್. ಮಾನಸಯ್ಯ ಹೇಳಿದರು.
ರಸ್ತೆ ಅಪಘಾತಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿಗೆ ತಂದ ಹೊಸ ಕಾಯ್ದೆಯ ಹಿಂದೆ ದೊಡ್ಡ ಷಡ್ಯಂತರ ಇದೆ. ಅಪಘಾತ ಪ್ರಕರಣದಲ್ಲಿ ಚಾಲಕನಿಗೆ 10 ವರ್ಷ ಜೈಲು 7 ಲಕ್ಷ ದಂಡಕ್ಕೆ ಹೆದರಿ ಲಾರಿ ಮಾಲೀಕ ಹಾಗೂ ಚಾಲಕ ಸರಕು ಸಾಗಾಣಿಕೆ ಕಸುಬಿಗೆ ಕೈ ಮುಗಿಯಲಿದ್ದಾರೆ.
ತದನಂತರ ದೇಶದ 152000 ಕಿಲೋ ಮೀಟರ್ ವ್ಯಾಪ್ತಿಯ 599 ರಾಷ್ಟ್ರೀಯ ಹೆದ್ದಾರಿಗಳ ಸರಕು ಸಾಗಾಣಿಕೆ ದಂದೆ ರಿಲಯನ್ಸ್ ಹಾಗೂ ಎಸ್ ಆರ್ ಕಂಪನಿಗಳ ಪಾಲಾಗುತ್ತದೆ. ಅಲ್ಲದೆ ಭಾರತ ಸರಕು ಸಾಗಾಣಿಕೆ ಕ್ಷೇತ್ರದಲ್ಲಿ 7.56 ಕೋಟಿ ಚಾಲಕರು, 5 ಕೋಟಿ ಹಮಾಲರು, 3 ಕೋಟಿಗೂ ಹೆಚ್ಚು ಗ್ಯಾರೇಜ್ ವರ್ಕ್ ಶಾಪ್ ಕೆಲಸಗಾರರು ಅಂದರೆ 15 ಕೋಟಿಗೂ ಹೆಚ್ಚು ಜನ ದುಡಿದು ಜೀವಿಸುತ್ತಿದ್ದಾರೆ.
ಈ ಪೈಕಿ ಶೇಕಡ 80ರಷ್ಟು ಮುಸ್ಲಿಮರಿದ್ದಾರೆ! ಒಟ್ಟಾರೆ ರಾಷ್ಟ್ರೀಯ ಸರಕು ಸಾಗಾಣಿಕೆ ಖಾಸಗಿಕರಣ ಹಾಗೂ ಮುಸ್ಲಿಮ ವಿರೋಧಿ ದ್ವೇಷ ರಾಜಕಾರಣ ಸೇರಿ ಹೊಸ ಕಾನೂನು ಬಂದಿದೆ. ಇದನ್ನು ಹಿಂಪಡೆಯುವವರೆಗೂ ಈ ರಾಷ್ಟ್ರೀಯ ಮುಷ್ಕರ ಮುಂದುವರೆಯಬೇಕು ” ಎಂದು ಕರೆ ನೀಡಿದರು. ವಿವಿಧ ರಂಗಗಳ ಕಾರ್ಮಿಕರು ಈ ರಾಷ್ಟ್ರೀಯ ಲಾರಿ ಚಾಲಕರ ಮುಷ್ಕರವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾಷಾ ಖಾನ್, ಹುಚ್ಚ ರೆಡ್ಡಿ, ಅಜೀಜ್ ಜಾಗೀರ್ದಾರ್, ಅಡಿವಿ ರಾವ್, ನಿರಂಜನ್ ಕುಮಾರ್ ಇದ್ದರು.