ಅಂಬಿಗರ ಚೌಡಯ್ಯ, ಡಾ.ಶಿವಕುಮಾರ ಸ್ವಾಮೀಜಿ ಮಹಾನ್ ಚೇತನ ಶಕ್ತಿ

0
30

ಶಹಾಬಾದ: ಸಾಮಾಜಿಕ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ಮಾನವತಾವಾದಿ ನಿಜಶರಣ ಅಂಬಿಗರ ಚೌಡಯ್ಯ ನವರಾದರೇ, ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮಹಾನ್ ಚೇತನ ಶಕ್ತಿಯಾಗಿದ್ದರು ಎಂದು ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಹೇಳಿದರು.

ಅವರು ರವಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ನಿಜಶರಣ ಅಂಬಿಗರ ಚೌಡಯ್ಯನವರ ಮೌಲ್ಯಗಳು ಸಾರ್ವಕಾಲಿಕ. ಅವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿನ ಅಂಧಶ್ರದ್ಧೆ, ಶಿಕ್ಷಣದ ಕೊರತೆ, ಮೂಢನಂಬಿಕೆಗಳನ್ನು ನೀಗಿಸಬಹುದು.

ಮುಖಂಡ ಬಸವರಾಜ ಮದ್ರಿಕಿ ಮಾತನಾಡಿ, 12 ನೇ ಶತಮಾನದಲ್ಲಿ ಸಮಾಜದಲ್ಲಿ ಡಾಂಬಿಕತನ, ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಿ ವಚನ ಸಾಹಿತ್ಯಗಳ ಮೂಲಕ ಅಂಬಿಗರ ಚೌಡಯ್ಯನವರು ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಹೇಳಿದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ಇಂದಿಗೂ ಜನರಲ್ಲಿ ಏನಾದರೂ ಕಾವಿಗೆ ಬೆಲೆ ಮತ್ತು ಖದರ್ ಇದಿದ್ದೆಯಾದರೆ ಅದು ಡಾ.ಶಿವಕುಮಾರ ಸ್ವಾಮೀಜಿಯಂತವರಿಂದ. ಅವರು ಯಾವುದೇ ಜಾತಿ-ಭೇಧವಿಲ್ಲದೇ ಹನ್ನೆರಡನೇಯ ಶತಮಾನದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಾದಿ ಶರಣರ ವಿಚಾಧಾರೆ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ಮಹಾಶಿವಯೋಗಿಗಳು ಎಂಬ ಖ್ಯಾತಿಗೆ ಪಾತ್ರರಾದವರು.ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ಪ್ರೀತಿಯ ಅಭಿಮಾನ ಪಡೆದಿದ್ದಾರೆ.ಅವರು ಇಂದು ನಮ್ಮೊಂದಿಗಿಲ್ಲ.ಆದರೆ ಜನಮಾನಸದ ಹೃದಯಮಂದಿರದಲ್ಲಿ ಪೂಜಿಸಲ್ಪಡುತ್ತಿದ್ದಾರೆ ಎಂದರು.

ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ, ಉಪನ್ಯಾಸಕ ಸಾಬಣ್ಣ ಗುಡುಬಾ, ಶ್ರೀರಾಮ ಚವ್ಹಾಣ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here