ಅಫಜಲಪುರದಲ್ಲಿ ಹಗಲು ಮನೆಗಳ್ಳತನ: ಸೊಲ್ಲಾಪುರದ ಮೂವರ ಸೆರೆ

0
27

ಅಫಜಲಪುರ: ಪಟ್ಟಣದ ನಿವಾಸಿ ಲಕ್ಷ್ಮಣ್ ತಂದೆ ಲಕ್ಕುನಾಯಕ್ ಪವಾರ್ ಅವರ ಮನೆಯ ಬೀಗ ಮುರಿದು ಟ್ರೇಜರಿಯಲ್ಲಿ ಇಟ್ಟಿದ್ದ 47 ಗ್ರಾಮ್ ತೂಕದ ಬಂಗಾರದ ಆಭರಣಗಳು ಮತ್ತು 70 ಗ್ರಾಮ್ ತೂಕದ ಬೆಳ್ಳಿಯ ಆಭರಣಗಳನ್ನು ಹಾಡಹಗಲೇ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 1.85 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರನ್ನು ಸೊಲ್ಲಾಪೂರದ ಅನಂತ್ ತಂದೆ ಕಮಸರ್ ಚವ್ಹಾಣ್ (48), ಕಿಶನ್ ತಂದೆ ಕುಬೇರ್ ಕಾಳೆ (25), ಮೂಲತ: ಆಳಂದ್ ತಾಲ್ಲೂಕಿನ ರಾಜೋಳ್ ಗ್ರಾಮದ ನಿವಾಸಿ ಹಾಗೂ ಹಾಲಿ ವಸ್ತಿ ಸೊಲ್ಲಾಪೂರದ ಲಕ್ಷ್ಮಣ್ ತಂದೆ ದಾದು ಕಾಳೆ (25) ಎಂದು ಗುರುತಿಸಲಾಗಿದೆ. ಬಂಧಿತರಿಂದ 1.75 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಹಾಗೂ 2800ರೂ.ಗಳ ಮೌಲ್ಯದ ಬೆಳ್ಳಿಯ ಆಭರಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Contact Your\'s Advertisement; 9902492681

ಕಳೆದ 2022ರ ಅಕ್ಟೋಬರ್ 12ರಂದು ಹಗಲು ಹೊತ್ತಿನಲ್ಲಿ ಮನೆಗಳ್ಳತನವಾದ ಕುರಿತು ಲಕ್ಷ್ಮಣ್ ಪವಾರ್ ಅವರು ದೂರು ಸಲ್ಲಿಸಿದ್ದರು.

ಆಳಂದ್ ಉಪ ವಿಭಾಗದ ಡಿವೈಎಸ್‍ಪಿ ಗೋಪಿ ಆರ್.ಡಿ., ಅವರ ನೇತೃತ್ವದಲ್ಲಿ ಸಿಪಿಐ ಭಾಸು ಚವ್ಹಾಣ್, ಪಿಎಸ್‍ಐ ಸಿದ್ದೇಶ್ವರ್ ಗರಡೆ, ಸಿಬ್ಬಂದಿಗಳಾದ ಸಂತೋಷ್ ಮಲಘಾಣ್, ಆನಂದ್ ಹಿರೇಮಠ್, ಯಲ್ಲಪ್ಪ ಭಜಂತ್ರಿ, ಕಾಶೀನಾಥ್, ಸಂಗಣ್ಣ, ಬಲರಾಮ್ ಅವರ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾರ್ಯಾಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here