ಕಲಬುರಗಿ ಸರ್ವಿಸ್ ರಿಂಗ್ ರೋಡ್ ನಿರ್ಮಾಣಕ್ಕೆ 57 ಕೋಟಿ ಮಂಜೂರು: ಸಂಸದ ಜಾಧವ್

0
34

ಕಲಬುರಗಿ: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದು ಅತಿಕ್ರಮಣಕ್ಕೆ ಒಳಗಾದ ರಾಮ ಮಂದಿರ, ಖರ್ಗೆ ಪೆಟ್ರೋಲ್ ಬಂಕ್, ಹುಮ್ನಾಬಾದ್ ರಿಂಗ್ ರೋಡ್ ಕ್ರಾಸ್ ವರೆಗಿನ ಸರ್ವಿಸ್ ರೋಡ್ ನ್ನು ಈಗಾಗಲೇ ಅತಿಕ್ರಮಣ ಆಗಿರುವ ಜಾಗವನ್ನು ತೆರವುಗೊಳಿಸಿ ಅಲ್ಲಿರುವ ವಿದ್ಯುತ್ ಕಂಬ ಟಿಸಿ ಸ್ಥಳಾಂತರ ಗೊಳಿಸಿ ಸರ್ವೀಸ್ ರೋಡ್ ನಿರ್ಮಾಣಕ್ಕೆ 56.96 ಕೋಟಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಖರ್ಗೆ ಪೆಟ್ರೋಲ್ ಪಂಪ್ ನಿಂದ ಹುಮ್ನಾಬಾದ್ ಕ್ರಾಸ್ ರಿಂಗ್ ರೋಡ್ ವರೆಗೂ ಅತಿಕ್ರಮಣ ವಾಗಿರುವುದರಿಂದ ಅಲ್ಲಿ ಸರ್ವಿಸ್ ರೋಡ್ ನಿರ್ಮಿಸಲು ಸಾಧ್ಯವಾಗಲಿಲ್ಲ. ಅನೇಕ ಬಾರಿ ಸಚಿವರು ಹಾಗೂ ಸಂಬಂಧ ಪಟ್ಟ NHAI ಮೇಲಧಿಕಾರಿಗಳಿಗೆ ಭೇಟಿಯಾಗಿ ಈ ಅತಿಕ್ರಮಣ ಮತ್ತು ಅಪೂರ್ಣ ಸರ್ವಿಸ್ ರಸ್ತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಅದಕ್ಕೆ ಇದನ್ನು ಸರಿಪಡಿಸಬೇಕೆಂದು ಕೇಳಿದಾಗ ಕೇಂದ್ರ ಸಚಿವರು ಇದಕ್ಕೆ ಮನ್ನಣೆ ನೀಡಿ ಸರಿಸುಮಾರು 57 ಕೋಟಿ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಸರ್ವಿಸ್ ರೋಡ್ ಸುಧಾರಣೆಯಿಂದ ಮುಖ್ಯ ರಿಂಗ್ ರೋಡ್ ರಸ್ತೆ ಮೇಲೆ ದಟ್ಟಣೆ ಕಡಿಮೆಯಾಗುವುದರಿಂದ ಕಲಬುರಗಿ ಜನರಿಗೆ ಅನುಕೂಲವಾಗಲಿದೆ. ಈ ಹಿಂದೆ ಇದನ್ನು ಸರಿಪಡಿಸಲು ಯಾರು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ದುರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here