ಫರಹತಾಬಾದ ಪ್ರೌಢಶಾಲೆಯ SSLC ಪರೀಕ್ಷಾ ಕೇಂದ್ರ ಮುಂದುವರೆಸಲು ಆಗ್ರಹ

0
236

ಫರಹತಾಬಾದ: ತಾಲೂಕಿನ ಫರಹತಾಬಾದ ಸರ್ಕಾರಿ ಪ್ರೌಢಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇಂದ್ರವು ಖಾಸಗಿ ಶಾಲೆಗೆ ಪರೀಕ್ಷೆ ಕೇಂದ್ರವನ್ನು ಸ್ಥಳಾಂತರಿಸಿರುವುದು ಖಂಡನೀಯ ಅದನ್ನು ಮತ್ತೆ ಅದೇ ಸರ್ಕಾರಿ ಶಾಲೆಯಲ್ಲಿಯೇ ಪರೀಕ್ಷಾ ಕೇಂದ್ರ ‘ ಮುಂದುವರೆಸಬೇಕೆಂದು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು ಹತ್ತು ವರ್ಷಗಳಿಂದ ಫರಹತಾಬಾದ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇಂದ್ರವಾಗಿದೆ ಇಲ್ಲಿ ಸುಸೂತ್ರಾವಾಗಿ ಯಾವುದೇ ತೊಂದರೆ ಇಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದೇ ಇದ್ದರು ಈ ಪರೀಕ್ಷೆ ಕೇಂದ್ರವನ್ನು ದಿಢೀರನೆ ಖಾಸಗಿ ಶಾಲೆಗೆ ಸ್ತಳಾಂತರಿಸಲಾಗಿದೆ ಗ್ರಾಮಸ್ಥರರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆತಂಕವಾಗಿದೆ. ಯಾವ ಕಾರಣ ದಿಂದ ಪರೀಕ್ಷೆ ಕೇಂದ್ರವು ಫರಹತಾಬಾದ ಪ್ರೌಢಶಾಲೆಯಿಂದ ಬೇರೆ ಖಾಸಗಿ ಶಾಲೆಗೆ ಸ್ಥಳಾಂತರಿಸಿದ್ದಿರಿ. ಈ ಶಾಲೆಯಲ್ಲಿ ಏನು ತೊಂದರೆ ಆಗಿದೆ ಇಷ್ಟು ವರ್ಷಗಳ ಆಗದೆ ಇರುವ ತೊಂದರೆ ಏನಾಗಿದೆ.ಸರ್ಕಾರಿ ಶಾಲೆಗಳು ಮುಚ್ಚಬೇಕಾ, ಬಡ ಮತ್ತು ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರಬಾರದಾ ಅಥವಾ ಮುಚ್ಚಿ ಖಾಸಗಿ ಶಾಲೆಗಳು ಬೆಳೆಸೊದೆ ನಿಮ್ಮ ಉದ್ದೇಶ? ಈ ನಿಧಾರದ ಹಿಂದೆಯಿರುವ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬರಬಾರದು? ಇದನ್ನು ತಕ್ಷಣವಾಗಿ ಸರಿಪಡಿಸಿ ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಅದೇ ಸರ್ಕಾರಿ ಪ್ರೌಢಶಾಲೆ ಫರಹತಾಬದ ಪರೀಕ್ಷಾ ಕೇಂದ್ರದಿಂದ ಸದರಿ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಈ ಮೂಲಕ ತಮ್ಮ ಕೇಳಿಕೊಳ್ಳುತ್ತೇನೆ. ಸಾರ್ವಜನಿಕರಿಂದ ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರತಾಬಾದ ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಈ ಪತ್ರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ. ಆಕಾಶ ಅವರಿಗೆ ಮೂಲಕ ಮನವಿ ಮಾಡಿದರು.

ಸರ್ಕಾರಿ ಪ್ರೌಢಶಾಲೆ ಪರತಾಬಾದ ಶಾಲಾಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪೀರಪ್ಪ ಡೆಂಗಿ ಹಾಗೂ ಹೊನ್ನಕಿರಣಗಿಯ ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಶಿವರಾಜ ಸಜ್ಜನ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್ ನೆಲೋಗಿ, ಸಂತೋಷ್ ತಳವಾರ, ಗ್ರಾಮದ ಮುಖಂಡರಾದ ನಾಗೇಂದ್ರ ನಿಂಬರ್ಗಿ, ಬಸವರಾಜ ಸಬಶೆಟ್ಟಿ, ಈಶ್ವರ್ ನಾಸಿ, ಆಕಾಶ ಹರಳಯ್ಯ, ಬಸವರಾಜ ಮಾಹಶೆಟ್ಟಿ, ಸಚಿನ್ ಕಡಗಂಚಿ, ಸುರೇಶ್ ಸಬಶೆಟ್ಟಿ, ಆಕಾಶ್ ನಿಂಬರ್ಗಿ, ವೀರೇಶ್ ಡೆಂಗಿಮಠ, ಎಚ್ ಡಿ ಎಂ ಸಿ ಸದಸ್ಯರಾದ ಪದ್ಮಾವತಿ, ಸುಮಂಗಲ ಡೆಂಗಿ ಇನ್ನು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here