ಕಲಬುರಗಿ: ರೈಲು ಸಂಖ್ಯೆ 07377 ಬಿಜಾಪುರ ಹುಬ್ಬಳ್ಳಿ ಮಂಗಳೂರು ಹಾಗೂ 07378 ಮಂಗಳೂರು ಜಂಕ್ಷನ್ ಹುಬ್ಬಳ್ಳಿ ಬಿಜಾಪುರ ಕಲಬುರ್ಗಿ ಜಂಕ್ಷನ್ ವರೆಗೆ ವಿಸ್ತರಣೆ ಗೆ ರೈಲ್ವೆ ಮಂಡಳಿ ಗೆ ಮನವಿ ಸಲ್ಲಿಸಲಾಗಿದೆ ಎಂದು ಕೃಷಿ ತಜ್ಞ ರಾದ ಡಾ. ಗಿರೀಶ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ತೋಟಗಾರಿಕೆ, ವ್ಯಾಪಾರ, ಧಾರ್ಮಿಕ ಕ್ಷೇತ್ರ , ಪ್ರೇಕ್ಷಣೀಯ ಪ್ರವಾಸಿ ಸ್ಥಳ , ಉದ್ಯಮ, ದಾಲ ಮಿಲ್, ಸಿಮೆಂಟ್ ಕಾರ್ಖಾನೆ, ಮೆಡಿಕಲ್ ಇಂಜಿನೀಯರಿಂಗ್ ದಂತ ಕಾಲೇಜ್, ವಿವಿದ ವಿಶ್ವ ವಿದ್ಯಾಲಯ ಹೊಂದಿದ್ದು ಉತ್ತರ ಕರ್ನಾಟಕ,ಮದ್ಯ ಕರ್ನಾಟಕ, ಮಲ್ನಾಡ್ ಹಾಗೂ ಕರಾವಳಿ ಸಂಪರ್ಕ ಈ ರೈಲು ಕಲಬುರ್ಗಿ ಭಾಗಕ್ಕೆ ವಿಸ್ತರಿಸಿದರೆ.
ಸಾರ್ವಜನಿಕ ರಿಗೆ ಅನುಕೂಲ ಆಗಲಿದೆ. ಅದರಂತೆ ರೈಲು ಸಂಖ್ಯೆ 16515 ಯಶಾವಾಂತಪುರ ಕಾರವಾರ ಹಾಗೂ 16516 ಕಾರವಾರ ಯಶವಂತಪುರ ರೈಲು ಗುಂಟೆಕಲ್, ಮಂತ್ರಲಯ, ರಾಯಚೂರು, ಯಾದಗಿರಿ, ವಾಡಿ, ಶಾಹಬಾದ ಮೂಲಕ ಕಲಬುರ್ಗಿ ಗೆ ವಿಸ್ತರಣೆ ಮಾಡಲು ಕೋರಲಾಗಿದೆ.
ಇದರಿಂದ ಕಲಬುರ್ಗಿ ಬೆಂಗಳೂರು ಮಂಗಳೂರು ಕಾರವಾರ ಸಂಪರ್ಕ ಕಲ್ಪಿಸುವ ರೈಲು ಎಂಬ ಹೆಗ್ಗಳಿಕೆಗೆ ಬರಲಿದೆ. ಪ್ರಯಾಣಿಕರ ಬಹು ನಿರೀಕ್ಷಿತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಭಾಗದ ವಿಶ್ವ ವಿದ್ಯಾಲಯ ಒಕ್ಕೂಟ ಕೇಂದ್ರ ರೈಲ್ವೆ ಮಂತ್ರಿ ಗಳಿಗೆ ಖುದ್ದು ಭೇಟಿ ನೀಡಿ ಬೇಡಿಕೆ ಸಲ್ಲಿಸಲಿದೆ.