ತಿಪಣ್ಣಪ್ಪ ಕಮಕನೂರ್ ಅವರ ನಿರ್ಣಯ ಏಕ ಪಕ್ಷೀಯವಾಗಿದೆ; ಸಾಲಿ

0
34

ಚಿತ್ತಾಪುರ; ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಕೋಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸದೇ ಏಕಾಏಕಿ ಕೋಲಿ ಸಮಾಜದ ಸಮಾವೇಶ ಆಯೋಜಿರುವುದು ಸಮಂಜಸವಲ್ಲ ಎಂದು ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಫೆ. 25ರಂದು ಕೋಲಿ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ನಿರ್ಣಯ ಏಕ ಪಕ್ಷೀಯವಾಗಿದೆ. ಇದನ್ನು ತಾಲೂಕು ಕೋಲಿ ಸಮಾಜ ಖಂಡಿಸುತ್ತದೆ ಎಂದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಹಿಂದೆ ಕಮಕನೂರ ಅವರ ಸ್ವಾರ್ಥಕ್ಕಾಗಿ. ಹೀಗಾಗಿ ಚಿತ್ತಾಪುರ ಕೋಲಿ ಸಮಾಜದವರು ಈ ಸಮಾವೇಶಕ್ಕೆ ಬಹಿಷ್ಕಾರ ಹಾಕಲು ನಿರ್ಣಯ ಕೈಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕೋಲಿ ಸಮಾಜದ ಕೋಟಾದಡಿ ಕಮಕನೂರ ಅವರಿಗೆ ಎಂಎಲ್‌ಸಿ ಮಾಡಲಾಗಿದೆ ಹೊರತು ಅವರ ವೈಯಕ್ತಿಕ ವರ್ಚಿಸ್ಸಿನಿಂದ ಅಲ್ಲ‌. ಸಮಾಜದ ಹೆಸರಿನಲ್ಲಿ ಎಂಎಲ್‌ಸಿ ಸ್ಥಾನ ಪಡೆದ ಕಮಕನೂರ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವುದನ್ನು ಬಿಟ್ಟು ತಮ್ಮ ಸ್ವಾರ್ಥಕ್ಕೆ ಬಳಸಿ ಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೋಲಿ ಸಮಾಜದ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ,
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ್, ಬಸವರಾಜ
ಚಿನ್ನಮಳ್ಳಿ, ಸುರೇಶ ಬೆನಕನಳ್ಳಿ, ಗುರುನಾಥ ಗುದಗಲ್, ಬಸಣ್ಣ ತಳವಾರ, ಶರಣು ಸಿದ್ರಾಮಗೋಳ, ನಾಗೇಂದ್ರ ಜೈಗಂಗಾ, ತಮ್ಮಣ್ಣ ಡಿಗ್ಗಿ, ಮುನಿಯಪ್ಪ ಕೊಳ್ಳಿ, ಶಿವಕುಮಾರ ಯಾಗಾಪೂರ, ಕರಣಕುಮಾರ ಅಲ್ಲೂರ, ನಿಂಗಣ್ಣ ಹೆಗಲೇರಿ, ದಶರಥ ದೊಡ್ಡಮನಿ, ಭೀಮರಾಯ ಹೊತಿನಮಡಿ, ಲಕ್ಷ್ಮೀಕಾಂತ ಸಾಲಿ, ವೆಂಕಟರಮಣ ಬೇವಿನಗಿಡ, ಮಹಾದೇವ ಮುಗುಟಿ, ಮಲ್ಲಿಕಾರ್ಜುನ ಸಂಗಾವಿ, ಚಂದ್ರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here