ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆ ವಿಚಾರ: ಸಂಶೋಧಾನ ವಿದ್ಯಾರ್ಥಿಗೆ 25ಕ್ಕೂ ಹೆಚ್ಚು ಬೆದರಿಕೆ ಕರೆ

0
104

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆಡಳಿತ ಸೌಧ ಹಾಗೂ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆಗೆ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿರಯವ ಘಟನೆಗೆ ಸಂಬಂಧಿಸಿದಂತೆ ಅನಾಮಿಕರಿಂದ ಒರ್ವ ವಿದ್ಯಾರ್ಥಿಗೆ 25ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿದುಬಂದಿದೆ.

ಸಿಯುಕೆಯ ಸಂಶೋಧನಾ ವಿಭಾಗದ ವಿದ್ಯಾರ್ಥಿಯಾಗಿರುವ ನಂದಪ್ಪ ಅವರಿಗೆ ರಾಜ್ಯ ಬೇರೆ ಬೇರೆ ಜಿಲ್ಲೆಗಳಾದ ದಾವಣಗೆರೆ, ಮಂಡ್ಯ, ಧಾರವಾಡ, ಕಳಸಾ, ಶಿವಮೊಗ್ಗ ಮತ್ತು ಕಲಬುರಗಿ ಜಿಲ್ಲೆಗಳು ಸೇರಿದಂತೆ ವಿವಿಧ ಕಡೆಯಿಂದ ಜೀವ ಬೆದರಿಕೆ ಹಾಗೂ ನಿಂದನಾತ್ಮಕ ಕರೆಗಳು ಬಂದಿವೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಬುಧವಾರ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಸೌಧ ಹಾಗೂ ಗ್ರಂಥಾಲಯದಲ್ಲಿ ಬುಧವಾರ ಕೆಲವು ಶಿಕ್ಷಕರು ಮತ್ತು ಗ್ರಂಥಾಲಯದ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ವಸಂತ ಪಂಚಮಿ ನಿಮಿತ್ಯ ವಿಶ್ವವಿದ್ಯಾಲಯದಲ್ಲಿ ಚೌಟ್ರಿ ಹಾಕಿ ಸರಸ್ವತಿ ಪೂಜೆ ಮಾಡಲಾಗಿದೆ. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರೂ ಸಹ ಪಾಲ್ಗೊಂಡಿದ್ದರು.

ನಂದಪ್ಪ ಸೇರಿದಂತೆ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆ ಹಮ್ಮಿಕೊಂಡಿರುವುದಕ್ಕೆ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here