ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣ ದಿಂದ ನಾಡ ದೇವತೆ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ,ಅಧ್ಯಕ್ಷ ರಾಜಾ ಮುಕುಂದ ನಾಯಕ ಇದ್ದರು.
ನಾಡದೇವಿ ಹಾಗೂ ವಿವಿಧ ಶಾಲೆಗಳ ಸ್ತಬ್ಧ ಚಿತ್ರಗಳ ಮೆರವಣಿಯನ್ನು ನಗರದ ದರಬಾರ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ಗರುಡಾದ್ರಿ ಕಲಾ ಮಂದಿರದ ವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಸತ್ಯ ಹರಿಶ್ಚಂದ್ರ,ಬೇಡರ ಕಣ್ಣಪ್ಪ,ವಿಶ್ವಗುರು ಸಾಂಸ್ಕøತಿಕ ನಾಯಕ ಬಸವಣ್ಣ ಅಲ್ಲಮಪ್ರಭು,ಅಕ್ಕಮಹಾದೇವಿಯರವ ಛದ್ಮ ವೇಷದ ಅನುಭವ ಮಂಟಪ,ಅಯೋಧ್ಯೆಯ ಬಾಲರಾಮನ ಪ್ರಷ್ಠಾಪನೆಯ ಮೂರ್ತಿ,ರಾಮ ಲಕ್ಷ್ಮಣ ಸೀತೆ ಹನುಮಂತ,ಘತ್ತರಗಿ ಭಾಗ್ಯವಂತಿ ದೇವಿ,ಸುರಪುರರ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ,ಚಾಮುಂಡೇಶ್ವರಿ ದೇವಿ,ವಂಶಾವಳಿ ಹೇಳುವ ಹೇಳವರ,ಶ್ರೀಕೃಷ್ಣ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು.ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳ ಕೋಲಾಟ,ಲೇಜಿಂ,ಭಜನೆ ಗಮನ ಸೆಳೆದವು ಅಲ್ಲದೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಮೆರವಣಿಗೆಯಲ್ಲಿ ಮುಖಂಡರಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಕಾಂಗ್ರೆಸ್ ರಾಜ್ಯ ಪ್ರ.ಕಾರ್ಯದರ್ಶಿ ವಿಠ್ಠಲ್ ಯಾದವ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಪ್ರಕಾಶ ಸಜ್ಜನ್,ಕಿಶೋರ ಚಂದ್ ಜೈನ್,ಗ್ಯಾನ ಚಂದ್ ಜೈನ್,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ,ನಿಂಗರಾಜ ಬಾಚಿಮಟ್ಟಿ,ಬಿಇಓ ಯಲ್ಲಪ್ಪ ಕಾಡ್ಲೂರ,ಮಲ್ಲಣ್ಣ ಸಾಹು ನರಸಿಂಗಪೇಟ,ಭಿಮರಾಯ ಮೂಲಿಮನಿ, ಎಸ್.ಎನ್.ಪಾಟೀಲ್,ಜಯಲಲಿತಾ ಪಾಟೀಲ್, ಶಕೀಲ್ ಅಹ್ಮದ್ ಸೇರಿದಂತೆ ಅನೇಕ ಮುಖಂಡರು ಸಾವಿರಾರು ಜನರು ಭಾಗವಹಿಸಿದ್ದರು.
ಕಳೆದ ವರ್ಷದ ನಾಡಹಬ್ಬದ ನಾಡ ದೇವತೆ ಮೆರವಣಿಗೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿದ್ದರು.ಈ ಬಾರಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿಧರಾದ ಹಿನ್ನೆಲೆ ಶ್ರೀ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆಯಿಂದ ಅವರ ಸವಿನೆನಪಿನ ಸ್ತಬ್ಧ ಚಿತ್ರ ನಿರ್ಮಿಸಲಾಗಿತ್ತು.ಇದನ್ನು ಕಂಡು ಅನೇಕರು ರಾಜಾ ವೆಂಕಟಪ್ಪ ನಾಯಕ ಅವರನ್ನು ಸ್ಮರಿಸಿ ದುಖಃ ವ್ಯಕ್ತಪಡಿಸಿಸದರು.