ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

0
19

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ “ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ” ಅಂಗವಾಗಿ ಬೋಧಕ,ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಂದ ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು.

ಬಸವರಾಜಪ್ಪ ಅಪ್ಪಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಾನಗೌಡ ದೇಸಾಯಿ, ಶರಣಬಸವ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಹಾಗೂ ಶರಣಬಸವ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ರೇವಪ್ಪ ಎಸ್. ಪಾಟೀಲ ಅತಿಥಿಗಳಾಗಿ ಭಾಗವಹಿಸಿದ್ದರು.

Contact Your\'s Advertisement; 9902492681

ರೇವಪ್ಪ ಪಾಟೀಲರವರು ಮಹಾತ್ಮ ಗಾಂಧಿಜಿ ಅವರ ಕೊಡುಗೆ ಸ್ವತಂತ್ರ ಪಡೆಯುವಲ್ಲಿ ಅವರ ಹೋರಾಟ ಹಾಗೂ ಗಾಂಧಿಜಿಯವರು ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಬೇಟಿ ನೀಡಿ ದಾಸೋಹ ಮಹಾಮನೆಯ 7ನೇ ಪಿಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರೊಂದಿಗೆ ಸಂಭಾಷಣೆ ನಡೆಸಿದ ವಿವರಣೆ ಕುರಿತು ಮಾತನಾಡಿದರು.

ವಿವಿಧ ತರಗತಿಯ ವಿದ್ಯಾರ್ಥಿಗಳಾದ ಅನುಸೂಯಾ, ಪವನಕುಮಾರ, ರೇಣುಕಾ, ಮೊಹಮ್ಮದ್ ಫೈಜಲ್, ಮೊಹಮ್ಮದ್ ಮೋಯಿಜ್ ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಕ್ಷಮ್ ಜೈನ್ ನಿರೂಪಿಸಿದರು.

ಮೊಹಮ್ಮದ್ ಫೈಜಲ್ ಸ್ವಾಗತಿಸಿದರು ಹಾಗೂ ಮಯೂರ ಕಟ್ಟಿಮನಿಯವರು ವಂದಿಸಿದರು.ಕಾರ್ಯದರ್ಶಿಗಳಾದ ಶರಣಬಸಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ, ಯವರು ಸರ್ವರಿಗೂ ಶುಭಾಶಯ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here