ಸುರಪುರ: ವಿಜಯಪುರದ ಬಿಎಲ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಸೆರೆಬ್ರಲ್ ವೇನಸ್ ಟ್ರೋಮ್ಟೊಸಿಸ್ ಕಾಯಿಲೆಗೆ ತುತ್ತಾಗಿದ್ದ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಯುವಕ ಕಾರ್ತಿಕ ಬಡಗನ ಅಂಗಾಂಗಗಳ ದಾನ ಮಾಡುವ ಮೂಲಕ್ಕೆ ಸಮಾಜಕ್ಕೆ ಮಾದರಿಯಾದ ಕಾರ್ತಿಕ ಬಡಗಾ ಕುಟುಂಬಕ್ಕೆ ಸ್ಥಳಿಯ ಶಾಸಕ ನರಸಿಂಹ ನಾಯಕ(ರಾಜುಗೌಡ) ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಇಂದು ಕಾರ್ತಿಕ್ ತನ್ನ ಅಂಗಾಂಗಗಳ ದಾನ ಮಾಡಿ ಅಷ್ಟೂ ಜನರಲ್ಲಿ ಜೀವಂತವಾಗಿದ್ದಾನೆ.ಇಂತಹ ಮಗನನ್ನು ಹೆತ್ತ ತಾವುಗಳು ಧನ್ಯರು.ಮಗನನ್ನು ಕಳೆದುಕೊಂಡು ತಮಗಾದ ನೋವಿನಲ್ಲಿ ನಾವುಕೂಡ ಭಾಗಿಯಾಗುತ್ತೆವೆ.ಇಂದಿನ ಎಲ್ಲಾ ಜನರಿಗೆ ತಾವು ಮಾದರಿಯಾಗಿರುವಿರಿ.ಮಗನ ಸಾವು ವ್ಯರ್ಥವಾಗಬಾರದೆಂದು ಅಂಗಾಂಗಗಳ ದಾನ ಮಾಡುವ ಮೂಲಕ ನೀವು ಸಮಾಜಕ್ಕೆ ಮಾದರಿಯಾಗಿರುವಿರಿ,ನಿಮಗೆ ನೋವು ಭರಿಸುವ ಶಕ್ತಿ ಭಗವಂತೆ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ,ಭೀಮಣ್ಣ ಬೇವಿನಹಾಳ ಸೇರಿದಂತೆ ಅನೇಕ ಮುಖಂಡರು ಹಾಗು ರುಕ್ಮಾಪುರ ಗ್ರಾಮಸ್ಥರಿದ್ದರು.