ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ರಸ್ತಾ ರೋಕೋ ಚಳುವಳಿ ಫೆ.19ರಂದು

0
27

ಶಹಾಬಾದ: ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಫೆ.19ರಂದು ಬೆಳಿಗ್ಗೆ 10:30 ಕ್ಕೆ ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿ ವತಿಯಿಂದ ಎರಡನೇ ಹಂತದ ರಸ್ತಾ ರೋಕೋ ಚಳುವಳಿಯನ್ನು ಹಮ್ಮಿಕೊಂಡಿದ್ದೆವೆ ಎಂದು ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿಯ ಮುಖ್ಯಸ್ಥರಾದ ಮತ್ತು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಮುಖ್ಯ ರಸ್ತೆ ಕಳೆದ ಹಲವು ವರ್ಷಗಳಿಂದ ಹದಗೆಟ್ಟು ಹೋಗಿದೆ.ಇದರಿಂದ ಸಾರ್ವಜನಿಕರು ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಇಲ್ಲಿನ ಸಾರ್ವಜನಿಕರು, ಶಾಲಾ-ಮಕ್ಕಳು ಧೂಳಿನಲ್ಲಿಯೇ ತೆರಳುವಂತಾಗಿದೆ.ಪ್ರತಿ ದಿನ ಉಸಿರುವಗಟ್ಟುವ ವಾತಾವರಣದಿಂದ ಜನರು ಬೇಸತ್ತು ಹೋಗಿದ್ದಾರೆ.

Contact Your\'s Advertisement; 9902492681

ಮಳೆ ಬಂದರೆ ಕೆಸರಿನ ಮಧ್ಯೆ ತೆರಳುವ ಪ್ರಸಂಗ.ಒಟ್ಟಾರೆ ಸಿಸನ್ ರಸ್ತೆಯಾಗಿ ಮಾರ್ಪಡುತ್ತದೆ.ಯಾವುದೇ ರಸ್ತೆಗೂ ಹೋದರೂ ದೊಡ್ಡ ಹೊಂಡಗಳೇ ಕಾಣಸಿಗುತ್ತವೆ.ಇದಕ್ಕಾಗಿ ಕಳೆ ನಾಲ್ಕು ತಿಂಗಳ ಹಿಂದಷ್ಟೇ ವಾಡಿ ವೃತ್ತದಲ್ಲಿ ಬೃಹತ್ ಹೋರಾಟ ಕೈಗೊಂಡಾಗ, ಸ್ಥಳೀಯ ಶಾಸಕರು 8 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.8 ದಿನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಪತ್ರಿಕೆ ಹೇಳಿ ಯಾಮಾರಿಸಿದ್ದಾರೆ.

ಇಂದಿಗೆ ನಾಲ್ಕು ತಿಂಗಳು ಕಳೆದರೂ ಜನರು ಇದೇ ಹದಗೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡಬೇಕಿದೆ.ಆದ್ದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಎರಡನೇ ಹಂತದ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಬಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಗನ್ನಾಥ.ಎಸ್.ಹೆಚ್,ನಾಗಣ್ಣ ರಾಂಪೂರೆ, ಗುಂಡಮ್ಮ ಮಡಿವಾಳ,ಮಹ್ಮದ್ ಮಸ್ತಾನ,ನಾಗಪ್ಪ ರಾಯಚೂರಕರ್,ಮಲ್ಲಣ್ಣ ಮಸ್ಕಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here