ಫಿರೋಜಾಬಾದ್, ನದ್ದಿಸಿಣ್ಣುರ ಗ್ರಾಮದಲ್ಲಿ ಜವಳಿ ಪಾರ್ಕ್ ಅಥವಾ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸಿಎಂಗೆ ಮನವಿ

0
82

ಕಲಬುರಗಿ: ತಾಲೂಕಿನ ಕಿರಣಗಿ, ಫಿರೋಜಾಬಾದ್ ಮತ್ತು ನದ್ಧಿಸಿಣ್ಣುರ ಗ್ರಾಮಗಳ ಜಮೀನುಗಳಲ್ಲಿ ಜವಳಿ ಪಾರ್ಕ್ ಅಥವಾ ಸೋಲಾರ್ ಪಾರ್ಕ್ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಖಾತರಿ ಪಡಿಸಬೇಕೆಂದು ಅಫಜಲಪುರ ಮತಕ್ಷೇತ್ರದ ಶಾಸಕ ಎಂ.ವೈ ಪಾಟೀಲ್ ಅವರ ನೇತೃತ್ವದಲ್ಲಿ ಬೆಂಗಳೂರು ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಭೇಟಿ ಮಾಡಿ‌ ಮನವಿ ಸಲ್ಲಿಸಿದರು.

ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದರೆ ಯಾವ ಉದ್ದೇಶಕ್ಕಾಗಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ಧಿರಿ ಅದನ್ನು 5 ವರ್ಷದ ವಳಗೆ ಕಾರ್ಯ ಪ್ರಾರಂಭ ಮಾಡಿಲ್ಲವಾದರೆ ರೈತರಿಗೆ ಅವರು ಜಮಿನು ವಾಪಸ್ ಕೊಡಬೇಕಾಗುತ್ತದೆಂದು ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಧರ್ಮರಾವ ಶೆಟ್ಟಿ, ಮಶಾಕ ಪಟೇಲ್ ಫಿರೋಜಾಬಾದ್ ವಕೀಲರು ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಫರಹತಬಾದ್, ಲೋಹಿತ್ ಕೋಣಿನ, ಅಣವೀರ ಶಿರೂರು ಫಿರೋಜಾಬಾದ್, ಶಿವಯೋಗಪ್ಪ ಪೂಜಾರಿ ಉಪಸ್ಥಿತರಿದ್ದರು.

ಜವಳಿ ಪಾರ್ಕ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here