ಕಲಬುರಗಿಯಲ್ಲಿ ಕನ್ನಡದ ತೇರು ಎಳೆಯಲು ಭರದ ಸಿದ್ಧತೆ: 26, 27ಕ್ಕೆ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

0
75

ಕಲಬುರಗಿ: ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 26 ಮತ್ತು 27 ರಂದು ನಗರದ ಡಾ. ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ-ಹಿರಿಯ ಜಾನಪದ ವಿದ್ವಾಂಸ ಡಾ. ಟಿ.ಎಂ. ಭಾಸ್ಕರ್ ಅವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣಿಯಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ತೇಗಲತಿಪ್ಪಿ, ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆ ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಾಡಿನ ಅನೇಕ ಸಾಹಿತಿಗಳು, ಹೋರಾಟಗಾರರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ಅನ್ಯ ಭಾಷೆಗಳ ವ್ಯಾಮೋಹದಲ್ಲಿ ಕನ್ನಡ ಭಾಷೆ ನಲುಗುತ್ತಿದ್ದು, ಕನ್ನಡ ನಾಡಿನ ಜನತೆ ಭಾಷಾಭಿಮಾನ ಬೆಳೆಸಿಕೊಳ್ಳಲು ಅದಕ್ಕೆ ಪೂರಕವಾದ ವಿಷಯಗಳನ್ನೊಳಗೊಂಡ ಆಡಂಬರವಿಲ್ಲದ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಲು ಉದ್ದೇಶಿಸಲಾಗಿದೆ.

Contact Your\'s Advertisement; 9902492681

26 ರಂದು ಬೆ.8.15 ಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಂದ ಧ್ವಜಾರೋಹಣ ನೆರವೇರಲಿದೆ. ಮುಂಜಾನೆ 9.15 ಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೇಯರ್ ವಿಶಾಲ ಎಸ್ ಧರ್ಗಿ ಚಾಲನೆ ನೀಡಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಸಕ ದತ್ತಪ್ಪ ಸಾಗನೂರ ಅವರು ನೇತೃತ್ವ ವಹಿಸಲಿದ್ದಾರೆ.

ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ವೇದಿಕೆಯಡಿಯಲ್ಲಿ ಬೆ. 11.15 ಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪಾ ಅವರ ದಿವ್ಯ ನೇತೃತ್ವದಲ್ಲಿ ಜರುಗಲಿರುವ ಸಮ್ಮೇಳನವನ್ನು ನಾಡಿನ ಹಿರಿಯ ಸಾಹಿತಿ ಡಾ. ರಾಜಪ್ಪ ದಳವಾಯಿ ಉದ್ಘಾಟಿಸಲಿದ್ದಾರೆ. ಸಾಹಿತಿ ಧರ್ಮಣ್ಣ ಎಚ್ ಧನ್ನಿ ಸಂಪಾದಕತ್ವದ `ಸಂಕಥನ’ ಕೃತಿಯನ್ನು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್ ಬಿಡುಗಡೆಗೊಳಿಸಲಿದ್ದಾರೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಸರ್ವಾಧ್ಯಕ್ಷತೆ ವಹಿಸಲಿದ್ದು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಎಂ. ಖರ್ಗೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕಲ್ಯಾಣರಾವ ಜಿ ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ, ಗುಲಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಉಪಸ್ಥಿತರಿರುವರು. ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿ.ಆರ್.ಪಾಟೀಲ, ಬಸವರಾಜ ಮತ್ತಿಮೂಡ, ಕನೀಜ್ ಫಾತಿಮಾ, ಡಾ. ಬಿ.ಜಿ.ಪಾಟೀಲ, ಎಂ. ವೈ.ಪಾಟೀಲ, ಶಶೀಲ್ ಜಿ ನಮೋಶಿ, ತಿಪ್ಪಣಪ್ಪ ಕಮಕನೂರ, ಡಾ. ಅವಿನಾಶ ಜಾಧವ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ನಂತರ ಮಧ್ಯಾಹ್ನ 1.05 ಕ್ಕೆ ನಡೆಯುವ ಕನ್ನಡ ಸಾಹಿತ್ಯದ ವೈವಿದ್ಯತೆ ಗೋಷ್ಠಿಯಲ್ಲಿ ಕೀರ್ತನ ಸಾಹಿತ್ಯದ ಕುರಿತು ಡಾ.ಶ್ರೀನಿವಾಸ ಸಿರನೂರಕರ್,ಪ್ರಾಚೀನ ಸಾಹಿತ್ಯ-ಸಂಸ್ಕøತಿ-ಪರಂಪರೆ ಕುರಿತು ಮುಡುಬಿ ಗುಂಡೇರಾವ, ವಚನ ಸಾಹಿತ್ಯದ ಕುರಿತು ಪ್ರೊ. ಶಿವರಾಜ ಪಾಟೀಲ, ಜನಪದ ಮತ್ತು ತತ್ವಪದ ಸಾಹಿತ್ಯ ಡಾ. ಮೀನಾಕ್ಷಿ ಬಾಳಿ ಮಾತನಾಡಲಿದ್ದಾರೆ.

ಮಧ್ಯಾಹ್ನ 2.35 ಕ್ಕೆ ಕಲಬುರಗಿ ಜಿಲ್ಲೆಯ ಸಾಹಿತ್ಯದ ವೈಶಿಷ್ಟ್ಯತೆ ಶೀರ್ಷಿಕೆಯಡಿಯಲ್ಲಿ ಆಧುನಿಕ ಸಾಹಿತ್ಯದ ಕಿರು ರೂಪಗಳು ಕುರಿತು ಡಾ. ಶ್ರೀಶೈಲ್ ನಾಗರಾಳ, ಮಹಿಳಾ ಸಾಹಿತ್ಯದ ಕುರಿತು ಕಾವ್ಯಶ್ರೀ ಮಹಾಗಾಂವಕರ್, ದಲಿತ-ಬಂಡಾಯ ಸಾಹಿತ್ಯದ ಕುರಿತು ಎಸ್ ಪಿ ಸುಳ್ಳದ್, ಪ್ರಚಲಿತ ಸಾಂಸ್ಕøತಿಕ ಸಾಧನೆ ಕುರಿತು ಡಾ. ಶಿವಾನಂದ ಭಂಟನೂರ ಮಾತನಾಡಲಿದ್ದಾರೆ.

ಇಳಿಹೊತ್ತು 4.05 ಕ್ಕೆ ಹಿರಿಯ ಸಾಹಿತಿ ಡಾ. ಶಿವರಾಜಶಾಸ್ತ್ರೀ ಹೇರೂರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಹಿರಿಯರ ಕವಿಗೋಷ್ಠಿಯಲ್ಲಿ ಡಾ. ಅರುಣಕುಮಾರ ಲಗಶೆಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ. ಸುಮಾರು 35 ಕ್ಕೂ ಹೆಚ್ಚು ಹಿರಿಯ ಕವಿಗಳು ಕವನ ವಾಚಿಸಲಿದ್ದಾರೆ.
27 ರಂದು ಬೆಳಗ್ಗೆ 10.30 ಕ್ಕೆ ಸಮ್ಮೇಳನಾಧ್ಯಕ್ಷರ ಬದುಕು ಬರಹ ಹಾಗೂ ಮಾತು-ಮಂಥನದಲ್ಲಿ ಧಾರವಾಡದ ಡಾ. ವಿ.ಜಿ. ಪೂಜಾರ ಅವರು ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಮಾತನಾಡಲಿದ್ದಾರೆ.

ಬೆ.11.30 ಕ್ಕೆ ಕೃಷಿ, ಆರೋಗ್ಯ, ಪರಿಸರ, ಪ್ರಾದೇಶಿಕತೆ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಸ್ಮಿತೆ ಕುರಿತು ಲಕ್ಷ್ಮಣ ದಸ್ತಿ, ಕೃಷಿ-ಸ್ವಾವಲಂಬಿ ಜೀವನ ಕುರಿತು ಆದಿನಾಥ ಹೀರಾ, ಆರೋಗ್ಯಕ್ರ ಜನಜೀವನ ಸೋಮನಾಥ ರೆಡ್ಡಿ ಪುರ್ಮಾ, ಪರಿಸರ ಸಮತೋಲನ ಕುರಿತು ಡಾ. ಬಾಬುರಾವ ಶೇರಿಕಾರ ಮಾತನಾಡಲಿದ್ದಾರೆ. ಮಧ್ಯಾಹ್ನ 1.05 ಕ್ಕೆ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಕುರಿತು ಡಾ. ಸದಾನಂದ ಪೆರ್ಲ ಮಾತನಾಡಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 1.45 ಕ್ಕೆ ಹಿರಿಯ ಸಾಹಿತಿ ಡಾ. ವಾಸುದೇವ ಸೇಡಂ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ ನಡೆಯಲಿದ್ದು, ಡಾ. ನಾಗರಾಜ ಹೆಬ್ಬಾಳ ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲೆಯ ಅನೇಕ ಯುವ ಕವಿಗಳು ಕವನ ವಾಚಿಸಲಿದ್ದಾರೆ. ಇಳಿಹೊತ್ತು 4.45 ಕ್ಕೆ ಸಮಾರೋಪ ಹಾಗೂ ಸತ್ಕಾರ ಸಂಭ್ರಮದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಲಿಂಗಣ್ಣ ಗೋನಾಲ ಸಮಾರೋಪ ನುಡಿಗಳನ್ನಾಡಲಿದ್ದು, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಪಂ ನ ಮಾಜಿ ಸದಸ್ಯ ಹರ್ಷಾನಂದ ಸುಭಾಷ ಗುತ್ತೇದಾರ, ಡಿಡಿಪಿಯು ಉಪ ನಿರ್ದೇ ಶಕ ಶಿವಶರಣಪ್ಪ ಮುಳೇಗಾಂವ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಉದ್ಯಮಿ ಸೋಮಶೇಖರ ಟೆಂಗಳಿ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರವಿ ಲಾತೂರಕರ್, ಸೇವಂತಾ ಪಿ ಚವ್ಹಾಣ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸಮ್ಮನ ಸಲ್ಲಿಸಲಾಗುವುದು.

ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ಐತಿಹಾಸಿಕ ಸ್ಥಳಗಳುಳ್ಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಹಳೇ ಬೇರು – ಹೊಸ ಚಿಗುರು ಎನ್ನುವಂತೆ ಹಿರಿಯ ಕಲಾವಿದರ ಜೊತೆ ವಿವಿಧ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಹಿರಿಯ ಸಾಹಿತಿಗಳಾದ ಶಿವಶರಣ ಪಾಟೀಲ ಜಾವಳಿ, ಪ್ರೊ. ವಸಂತ ಕುಷ್ಠಗಿ, ಎಲ್.ಬಿ.ಕೆ. ಆಲ್ದಾಳ ಅವರ ಹೆಸರಿನ ಮೇಲೆ ಮಹಾದ್ವಾರಗಳನ್ನು ಅಳವಡಿಸಲಾಗುವುದು. ವಿವಿಧ ಲೇಖಕರಾದ ಸಿ.ಎಸ್. ಆನಂದ, ಡಾ. ಬಸವರಾಜ ಸಿ., ಡಾ. ಬಸವರಾಜ ಎಸ್ ಕಲೇಗಾರ, ಡಿ.ಗಿರೇಗೌಡ ಅರಳಿಹಳ್ಳಿ ಅವರ ವಿರಚಿತ ಮಾವು ಮಲ್ಲಿಗೆ, ದಲಿತ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಗಳ ಸಂಘರ್ಷ, ಜನಪದ ಕೌದಿಯ ಚಿತ್ತಾರ, ಬಹುಧಾರೆ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪನೆಗೊಳ್ಳಲಿವೆ.

ಹಾಸ್ಯ ಹೊನಲು :- ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ, ಶಂಭುಲಿಂಗ ಬುಳ್ಳಾ, ಶರಣು ದೇಸಾಯಿ, ಹೇಮಂತ್ ಮಾಲಗತ್ತಿ, ರಾಜು ಹೆಬ್ಬಾಳ ಅವರಿಂದ ಹಾಸ್ಯ ಕಾರ್ಯಕ್ರಮಗಳು ಜರುಗಲಿವೆ. ಕನ್ನಡ ಭವನದ ಆವರಣದಲ್ಲಿ ಶ್ರೀವಿಜಯ ಸದನ ನಿರ್ಮಿಸಿಕೊಟ್ಟ ದಾಸೋಹಿ ಬಿ.ಎಂ.ಪಾಟೀಲ ಕಲ್ಲೂರ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಎಲ್ಲ ಶಿಕ್ಷಕರು ಹಾಗೂ ಸರಕಾರಿ ನೌಕರರಿಗೆ ಅನ್ಯ ಕಾರ್ಯದ ನಿಮಿತ್ತ{ ಓ.ಓ.ಡಿ.} ವಿಶೇಷ ಸೌಲಭ್ಯ ಕಲ್ಪಿಸಿದ್ದು, ಈ ಕುರಿತು ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಾಮರಸ್ಯದೆಡೆಗೆ ನಮ್ಮ ಸಾಹಿತ್ಯದ ಪಯಣ ಬೆಳೆಸೋಣ.

ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಹುಮ್ಮಸದ ಉತ್ಸಾಹವನ್ನು ತೋರಿ ಭಾಗವಹಿಸುವ ಭರವಸೆ ಇದೆ. ಪತ್ರಿಕಾಗೋಷ್ಠಿಯಲ್ಲಿ ಶಿವರಾಜ ಎಸ್ ಅಂಡಗಿ, ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ವಿನೋದಕುಮಾರ ಜೇನವೇರಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here