ಮರೆಯಾದ ಸುರಪುರ ಕ್ಷೇತ್ರದ ಮುತ್ಸದ್ಧಿ ರಾಜಕಾರಣಿ ರಾಜಾ ವೆಂಕಟಪ್ಪ ನಾಯಕ

0
32

ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ,ಸರಕಾರದ ಮುಖ್ಯಮಂತ್ರಿಗಳಿಂದ ಹಿಡಿದು ಕ್ಷೇತ್ರದ ಒಬ್ಬ ಸಾಮಾನ್ಯ ಕಾರ್ಯಕರ್ತನು ಕೂಡ ಶಾಸಕ ರಾಜಾ ವೆಂಕಟಪ್ಪ ನಾಯಕ ಎಂದರೆ ಸಂಭಾವಿತ,ಕೊಟ್ಟ ಮಾತು ತಪ್ಪದ ರಾಜಕಾರಣಿ ಎಂದೇ ಖ್ಯಾತರಾಗಿದ್ದವರು.

ಕ್ಷೇತ್ರದ ಜನರ ಪಾಲಿನ ಮುತ್ಸದ್ಧಿ ರಾಜಕಾರಣಿ ರಾಜಾ ವೆಂಕಟಪ್ಪ ನಾಯಕ. ಕಳೆದ ನವೆಂಬರ್ 23 ರಂದು ತಮ್ಮ 68ನೇ ಹುಟ್ಟು ಹಬ್ಬವನ್ನು ರಾಜ್ಯದಲ್ಲಿ ಬರಗಾಲವಿದ್ದ ಕಾರಣ ಆಚರಿಸಬೇಡಿ,ಜನರಿಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದರು.67 ವಸಂತಗಳನ್ನು ಪೂರೈಸಿದ್ದ ರಾಜಾ ವೆಂಕಟಪ್ಪ ನಾಯಕ ಅವರು 23 ನವೆಂಬರ್ 1957ರಲ್ಲಿ ಜನಸಿದ್ದ ಆರ್.ವಿ.ಎನ್ ರಾಜಕೀಯದ ಮೊದಲ ಗುರು ಎಂದರೆ ಅವರ ತಂದೆ ರಾಜಾ ಕುಮಾರ ನಾಯಕ ಅವರು.ರಾಜಾ ಕುಮಾರ ನಾಯಕ ಅವರು ಕೂಡ ಎರಡು ಬಾರಿ ಶಾಸಕರಾಗಿದ್ದವರು.ಎಮ್.ಬಿ.ಬಿ.ಎಸ್ ಪದವಿಗೆ ಸೇರಿಕೊಂಡಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ 1987 ರಲ್ಲಿ ಮೊದಲ ಬಾರಿಗೆ ಪೇಠ ಅಮ್ಮಾಪುರ ಮಂಡಲ ಪ್ರಧಾನರಾಗಿ ಅಭಿವೃಧ್ಧಿ ಕಾರ್ಯಗಳ ಮೂಲಕ ಮಾದರಿ ಮಂಡಲ ಪಂಚಾಯತಿಯನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Contact Your\'s Advertisement; 9902492681

ನಂತರ 1994 ರಲ್ಲಿ ಎಸ್.ಬಂಗಾರೆಪ್ಪ ನವರು ಸ್ಥಾಪಿಸಿದ ಅಂದಿನ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸುರಪುರ ಕ್ಷೇತ್ರದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು,ನಂತರ 2000ನೇ ಇಸ್ವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದರು.

ನಂತರ 2013 ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು,ನಂತರ ನಡೆದ 2018ರ ಚುನಾವಣೆಯಲ್ಲಿ ಸೋಲು ಕಂಡರು ಛಲ ಬಿಡದೆ ಪಕ್ಷ ಸಂಘಟನೆಯನ್ನು ಮಾಡಿ 2013ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು.ನಂತರ 2018 ರಲ್ಲಿ ಸೋಲು ಕಂಡರು ನಂತರ ಕಳೆದ 2023ರ ಚುನಾವಣೆಯಲ್ಲಿ 25388 ಮತಗಳ ಅಂತರ ದಿಂದ ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ಅವರ ವಿರುದ್ಧ ಜಯಗಳಿಸಿದ್ದರು.

ಮಲ್ಲಿಕಾರ್ಜುನ ಖರ್ಗೆಯನ್ನು ರಾಜಕೀಯ ಗುರು ಎನ್ನುತ್ತಿದ್ದ ಆರ್.ವಿ.ನಾಯಕ; ಶಾಸಕ ರಾಜಾ ವೆಂಕಟಪ್ಪ ನಾಯಕ ಸದಾಕಾಲ ತನ್ನ ರಾಜಕೀಯ ಗುರು ಎಂದರೆ ಮಲ್ಲಿಕಾರ್ಜುನ ಖರ್ಗೆಯವರು ಎಂದು ಅಭಿಮಾನ ದಿಂದ ಹೇಳುತ್ತಿದ್ದರು.ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ, ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು ಕೂಡ ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆದುಕೊಳ್ಳುವಲ್ಲಿ ಸದಾಕಾಲ ಯಶಸ್ವಿಯಾಗಿದ್ದರು.ಅಲ್ಲದೆ ಮಲ್ಲಿಕಾರ್ಜುನ ಖರ್ಗೆಯವರಿಗೂ ರಾಜಾ ವೆಂಕಟಪ್ಪ ನಾಯಕ ಎಂದರೆ ಎಲ್ಲಿಲ್ಲದ ಪ್ರೀತಿ,2023ರ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮಲ್ಲಿಕಾರ್ಜುನ ಖರ್ಗೆಯವರು,ಸುರಪುರ ಕ್ಷೇತ್ರದ ಚುನಾವಣೆಗೆ ನಿಂತಿರುವುದು ರಾಜಾ ವೆಂಕಟಪ್ಪ ನಾಯಕ ಅಲ್ಲ ಮಲ್ಲಿಕಾರ್ಜುನ ಖರ್ಗೆಯೇ ನಿಂತಿದ್ದಾನೆ ಎಂದು ತಾವೆಲ್ಲ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು ಮಲ್ಲಿಕಾರ್ಜುನ ಖರ್ಗೆ.

ಕೊಟ್ಟ ಮಾತು ತಪ್ಪದ ವ್ಯಕ್ತಿತ್ವದ ರಾಜಕಾರಣಿ; ರಾಜಾ ವೆಂಟಕಪ್ಪ ನಾಯಕ ಎಂದರೆ ಕೊಟ್ಟ ಮಾತು ಎಂದೂ ತಪ್ಪದ ರಾಜಕಾರಣಿಯಾಗಿದ್ದರು.ಯಾರೇ ತಮ್ಮ ಬಳಿಗೆ ಏನಾದರು ಸಹಾಯ,ಕೆಲಸ ಎಂದು ಬಂದರೆ ಆಯ್ತು ಮಾಡುವೆ ಎಂದರೆ ಅದೇನೆ ಆಗಲಿ ಮಾಡಿಯೇ ತೀರುವ ವ್ಯಕ್ತಿತ್ವದ ರಾಜಕಾರಣಿಯಾಗಿದ್ದ ವ್ಯಕ್ತಿ ರಾಜಾ ವೆಂಕಟಪ್ಪ ನಾಯಕ.

ಅಭಿಮಾನಿಗಳ ಆಸೆ ಎಂದರೆ ರಾಜಾ ವೆಂಕಟಪ್ಪ ನಾಯಕ ಅವರು ಸಚಿವರಾಗಬೇಕು ಎನ್ನುವುದಾಗಿತ್ತು.ಆದರೆ ರಾಜಾ ವೆಂಕಟಪ್ಪ ನಾಯಕ ಎಂದೂ ಸಚಿವ ಸ್ಥಾನ ಬೇಕು ಎಂದು ಆಸೆ ಪಟ್ಟವರಲ್ಲ,ಆದರೆ ಅವರ ರಾಜಕೀಯ ಹಿರಿತನಕ್ಕೆ ಗೌರವಿಸಿ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಬೇಕು ಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದರು.ಅಭಿಮಾನಿಗಳ ಆಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಫೆಬ್ರವರಿ 1 ರಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದರು,ಅಂದು ಅಧಿಕಾರವನ್ನು ಸ್ವೀಕರಿಸಿದ್ದರು ರಾಜಾ ವೆಂಕಟಪ್ಪ ನಾಯಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here