ಮನುಷ್ಯ ಸಮಾಜ ಸೇವೆ ಮಾಡುವ ಕಡೆ ಮುಖ ಮಾಡಿವುದು ಅಗತ್ಯವಾಗಿದೆ: ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರರು

0
92

ಕಲಬುರಗಿ: ಮನುಷ್ಯ ಭೌತಿಕ ವಸ್ತುಗಳ ಬೆನ್ನು ಹತ್ತಿ ಪಾರಮಾರ್ಥಿಕ ಜೀವನದ  ಬದುಕುವ ಕಲೆಯಿಂದ ದೂರವಾಗಿ ಆನಂದ ಮತ್ತು ಮನಶಾಂತಿಯಿಂದ ವಂಚಿತನಾಗುತ್ತಿದ್ದು. ಕೇವಲ ಹಣ ಗಳಿಸುವುದು ಆಸ್ತಿ ಮಾಡುವುದು ಜೀವನದ ಉದ್ದೇಶವಲ್ಲವೆಂದು ಬೆಂಗಳೂರಿನ ಆರ್ಟ ಆಫ ಲಿವಿಂಗ್‌ನ ಪೂಜ್ಯ ಶ್ರೀ ಶರಣು ಗುರುಜಿ ನುಡಿದರು.

ಅಫಜಲಪೂರ ತಾಲ್ಲೂಕಿನ ಗೊಬ್ಬುರವಾಡಿ ತಾಂಡಾದ  ಸದ್ಗುರು ಶ್ರೀ ಸೇವಾಲಾಲ ಬಂಜಾರಾ ಶಕ್ತಿ ಪೀಠದಲ್ಲಿ ಗೌರ ಡಾಕ್ಟರೇಟಗೆ ಭಾಜನರಾದ ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದ ಅವರು ಜೀವನದಲ್ಲಿ ಮನುಷ್ಯ ಸಾದಿಸುವ ಮತ್ತು ಸಮಾಜ ಸೇವೆ ಮಾಡುವ ಕಡೆ ಮುಖ ಮಾಡಿವುದು ಅಗತ್ಯವಾಗಿದ್ದು ಪರಸೇವೆ ಮಾಡುವುದು ಸೌಭಾಗ್ಯವೆಂದು ಬಾವಿಸಿ ಕಾರ್ಯನಿರ್ವಹಿಸುವುದು ಒಳಿತ್ತೆಂದು ನುಡಿದ ಅವರು ಸಮಾಜದ ಆರೋಗ್ಯ ಶಿಕ್ಷಣ ಕೃಷಿ ದಾಸೋಹ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಧಾರ್ಮಿಕ ಮುಂದಾಳತ್ವ ವಹಿಸಿದರು ಸೇವಾ ಕೈಂಕರ್ಯ ಮಾಡುತ್ತಿರುವುದು ನಾವೆಲ್ಲ ಕಾಣುತ್ತಿದ್ದೇವೆ ಎಂದು ವಿವರಿಸಿದರು.

Contact Your\'s Advertisement; 9902492681

ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಶಕ್ತಿ ಪೀಠದ ಪೂಜ್ಯ ಶ್ರೀ ಬಳಿರಾಮ ಮಹಾರಾಜರು ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಶ್ರೀನಿವಾಸ ಸರಡಗಿ ಪರಮಪೂಜ್ಯರು ಕೈಗೊಂಡಿರುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದ್ದು. ಅವರ ಸಾಮಾಜಿಕ ಸೇವೆ ನಿಜಕ್ಕೂ ಮೆಚ್ಚುವಂತಹದು ಎಂದು ಸಂತಸ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಶಾಂತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಶ್ರೀನಿವಾಸ ಸರಡಗಿಯ ಪೂಜ್ಯ ರೇವಣಸಿದ್ದ ಶಿವಾಚಾರ್ಯರರಿಗೆ ಶಕ್ತಿ ಪೀಠದ ವಿಶೇಷ ಸತ್ಕಾರ ಸ್ವೀಕರಿಸಿ ಮಾತನಾಡಿದ ಪೂಜ್ಯರು ಇಂದು ಸಮಾಜಕ್ಕೆ ಭದ್ರ ಬೂನಾದಿಯಾದ ಯುವ ಸಮೂಹ ದುಶ್ಚಟಗಳ ದಾಸರಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದ ಅವರು ಗ್ರಾಮೀಣ ಭಾಗದಲ್ಲಿ ಮತ್ತು ತಾಂಡಾಗಳಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಅಕ್ರಮ ಸರಾಯಿ ನಿರ್ಬಂಧಿಸುವುದು ಬಿಟ್ಟು  ಮೊಬೈಲ್ ಕರೆ ಮಾಡಿದರೆ ಮನೆ ಬಾಗಿಲಿಗೆ ಸರಾಯಿ ತಲುಪಿಸುವ ಯೋಜನೆ ಕುರಿತು ರಾಜ್ಯ ಸರ್ಕಾರದ ಅಬಕಾರಿ ಮಂತ್ರಿಗಳು ಯೋಜನೆ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದ್ದು ಬಡವರ ಹಣದ ಮೇಲೆ ಸರ್ಕಾರ ನಡೆಸುವುದು ಅಗತ್ಯವಿದೆಯೇ ಎಂದು ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು ತಾಲ್ಲುಕಾ ಪಂಚಾಯತ ಸದಸ್ಯೆ ಶ್ರೀಮತಿ ಮಹಾದೇವಿ ಚೋಪಲು ರಾಠೋಡ, ಆನಂದ ಮಾಸ್ಟರ್ ನರಬೋಳಿ, ಯುವ ಮುಖಂಡರಾದ ಸಂತೋಷ ಆಡೆ, ಸಂಗಯ್ಯ ಸ್ವಾಮಿ, ಹಿರೇಮಠ, ನಾಗಲಿಂಗಯ್ಯ ಮಠಪತಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂತೋಷ ಜಾಧವ ಸ್ವಾಗತಿಸಿದರು ಸುದೀರ ಜಾಧವ ನಿರೂಪಿಸಿದರು ಶಕ್ತಿ ಪೀಠದ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here