ಕೊಪ್ಪಳ: ಸೌಹಾರ್ದ ಸಹಕಾರಿಯ ಗ್ರಾಹಕರು ಗಳಿಸಿದ ತಮ್ಮ ಆದಾಯದಲ್ಲಿನ ಸ್ವಲ್ಪ ಭಾಗವನ್ನು ಉಳಿತಾಯ ಮಾಡುವುದರ ಮೂಲಕ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿಕೊಂಡು ಆರ್ಥಿಕವಾಗಿ ಸದೃಢಗೊಳ್ಳುವಂತೆ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಕೆ.ಎಂ.ಸೈಯದ್ ಹೇಳಿದರು.
ಅವರು ಗುರುವಾರದಂದು ನಗರದ ಹೊಸಪೇಟೆ ರಸ್ತೆಯ ಕೆಎಂಎಸ್ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿರುವ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿಯಲ್ಲಿ 5ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಹೈದ್ರಾಬಾದ್-ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಸಮಾಜದ ಆರ್ಥಿಕ ಸ್ಥಿರತೆ ಹೊಂದುವ ಮನೋಭಾವನೆಯಿಂದ ನನ್ನ ಸ್ನೇಹಿತರೊಂದಿಗೆ ಸಮಾಲೋಚಿಸಿ ಸಮಾಜದಲ್ಲಿರುವ ಬಡವರ್ಗದವರಿಗೆ ಸಾಮಾಜಿಕ ಆರ್ಥಿಕತೆಯ ಸಹಾಯವನ್ನು ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವಂತೆ ಈ ಸಹಕಾರಿಯನ್ನು ಸ್ಥಾಪಿಸಿದ್ದೇವೆ.
ಹಣ ಗುಣ ಉಳಿಸಿದರೆ ಅವು ನಿಮ್ಮನ್ನು ಉಳಿಸುತ್ತವೆ, 2018-19ನೇ ಸಾಲಿನಲ್ಲಿ ದುಡಿಯುವ ಬಂಡವಾಳ ಹೊಂದಿ ಲಾಭಗಳಿಕೆಯತ್ತ ನಾವು ಸಾಗಿರುವುದು ಹರ್ಷದಾಯಕವಾಗಿದೆ, ನಮ್ಮ ಸಹಕಾರಿಯು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಕ್ರಿಕೇಟ್ ಕಬ್ಬಡ್ಡಿಗಳಂತಹ ಆಟಗಳಿಗೆ ಪರಿಕರಗಳನ್ನು ಮತ್ತು ಪ್ರೋತ್ಸಾಹಗಳನ್ನು ನೀಡುತ್ತಲಿದ್ದೇವೆ, ರಾಷ್ಟ್ರೀಯ ಹಬ್ಬಗಳು ಮತ್ತು ಸಹಕಾರಿ ಸಪ್ತಾಹದ ಕ್ರೀಯಾ ಚಟುವಟಿಕೆಗಳನ್ನು ನಿರ್ವಹಿಸುತ್ತ ಬರುತ್ತಲಿದ್ದೇವೆ, ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ 4ನೇ ವರ್ಷದಿಂದ ಈಗ 5ನೇವರ್ಷಕ್ಕೆ ಆರ್ಥಿಕವಾಗಿ ಮುನ್ನಡೆಯುತ್ತೀರುವುದು ಸಂತಸ ಎನ್ನಿಸುತ್ತದೆ ಈಗ ಸ್ವಂತ ಕಟ್ಟಡವನ್ನು ಹೊಂದಿದ್ದೇವೆ, ಗ್ರಾಹಕರಿಗೆ ಸಹಕಾರಿಯಿಂದ ಇನ್ನು ಹೆಚ್ಚಿನ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದ್ದೇವೆ ಗ್ರಾಹಕರು ಪತ್ತಿನ ಸೌಹಾರ್ದ ಸಹಕಾರಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಅಜಮೀರ ಅಲಿ, ಹಿರಿಯರಾದ ಜಾಫರಸಾಬ ಸಂಗಟಿ, ನಿರ್ದೇಶಕರಾದ ಮಹೆಬೂಬುಸಾಬ ಸೈಯದ್, ಗವಿಸಿದ್ದಪ್ಪ ಆರ್ಯೇರ, ಬಸವರಾಜ ಗಂಗಯ್ಯ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಫ್.ಎ.ನೂರಬಾಷ, ಹಾಗೂ ಗ್ರಾಹಕರು, ಶೇರ್‍ದಾರರು, ಸಿಬ್ಬಂದಿಗಳಾದ ವಾಸಿಂ, ಜಾಫರ್ ಸಾದೀಕ್ ಕುದ್ರಿಮೋತಿ ಉಪಸ್ಥಿತರಿದ್ದರು.