ಸಾಹಿತ್ಯದಿಂದ ಬದುಕಿನಲ್ಲಿ ಉತ್ಸಾಹ; ಸಚಿವ ಡಾ.ಶರಣಪ್ರಕಾಶ ಪಾಟೀಲರಿಂದ ಬಿಸಿಲ ನಾಡಿನ ಬೆಳದಿಂಗಳು ಕೃತಿ ಬಿಡುಗಡೆ

0
52

ಕಲಬುರಗಿ: ಸಾಹಿತ್ಯವು ಜೀವನದಲ್ಲಿ ಉತ್ಸಾಹಿಗಳಾಗಿ ಬದುಕಲು ಹಾಗೂ ಬದುಕಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ನಾಡಿನ ಹಿರಿಯ ಮಕ್ಕಳ ಸಾಹಿತಿಗಳಾದ ಎ.ಕೆ.ರಾಮೇಶ್ವರ ಅವರು ಅಗಾಧವಾದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಅಭಿಪ್ರಾಯಪಟ್ಟರು.

ನಗರದ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ರಾಷ್ಟ್ರಕೂಟ ಪುಸ್ತಕ ಮನೆ, ಸೇಡಂ ಹಾಗೂ ಕವಿರಾಜಮಾರ್ಗ ಪ್ರಕಾಶನ ಸಹಯೋಗದಲ್ಲಿ ನಡೆದ ಮಹಿಪಾಲರೆಡ್ಡಿ ಮುನ್ನೂರ್ ಅವರ ನುಡಿ ಸಾರಥ್ಯದ ‘ಬಿಸಿಲ ನಾಡಿನ ಬೆಳದಿಂಗಳು’ ಹಾಗೂ ಎ.ಕೆ.ರಾಮೇಶ್ವರ ಬರೆದ ‘ಕೆಂಪು ಗುಲಾಬಿಯ ಕಂಪು’ ಎರಡು ಕೃತಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಅನಾವರಣಗೊಳಿಸಿ ಮಾತನಾಡಿದರು.

Contact Your\'s Advertisement; 9902492681

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರ ಮಾತನಾಡಿ, ಮುಂಬರುವ ದಿನಗಳಲ್ಲಿ ಹತ್ತು ಲಕ್ಷದೊಂದಿಗೆ, ಎ.ಕೆ.ರಾಮೇಶ್ವರ ಅವರ ಪ್ರತಿμÁ್ಠನ ಸ್ಥಾಪನೆಗೆ ಸರ್ಕಾರದೊಂದಿಗೆ ಚರ್ಚೆ ನಡೆಸುವೆ ಎಂದು ಭರವಸೆ ನೀಡಿದರು.

ಕಲಬುರಗಿ ಸಾಹಿತ್ಯ ಲೋಕದ ಭೀಷ್ಮನಂತಿರುವ ರಾಮೇಶ್ವರ ಅವರು ಮಕ್ಕಳ ಸಾಹಿತ್ಯದಲ್ಲಿ ಅಮೋಘವಾದ ಸಾಧನೆಗೈದಿದ್ದಾರೆ. ಅವರ ಸಾಹಿತ್ಯವನ್ನು, ಜೀವನಗಾಥೆಯನ್ನು ಗುರುತಿಸಿ ಗೌರವಿಸಿದ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅವರ ಇಡೀ ಬಳಗಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಕೃತಿ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ವಿಕ್ರಮ ವಿಸಾಜಿ ಮಾತನಾಡಿದರು. ವೇದಿಕೆಯ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ, ಕಾರ್ಯಕ್ರಮವನ್ನು ಸಿ.ಎಸ್. ಮಾಲಿಪಾಟೀಲ ನಿರೂಪಸಿದರು.

ನನಗಿನ್ನೂ ಚೆನ್ನಾಗಿ ನೆನಪಿದೆ. ಬಹಳ ವರ್ಷಗಳ ಹಿಂದೆ ಎ.ಕೆ. ರಾಮೇಶ್ವರ ನನಗೆ ‘ವಚನ ಸಂಪುಟ’ಗಳನ್ನು ತಂದು ಕೊಟ್ಟಿದ್ದರು. ಸರಳ ಹಾಗೂ ಸೌಜನ್ಯವನ್ನು ಮೈಗೂಡಿಸಿಕೊಂಡ ಹಿರಿಯರಾದ ರಾಮೇಶ್ವರ ಅವರ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಮೇಲಾಗಿ ರಾಮೇಶ್ವರ ಅವರಿಗೆ 1 ಲಕ್ಷ ರೂ. ಹಮ್ಮಣಿ ಅರ್ಪಿಸಿದ್ದು ಸ್ತುತ್ಯರ್ಹ ಸಂಗತಿ. -ಡಾ. ಶರಣಪ್ರಕಾಶ ಪಾಟೀಲ, ಸಚಿವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here